ಮತ್ತೊಂದು ತೆಲುಗು ಸಿನಿಮಾ ಅವಕಾಶ ಕಳೆದುಕೊಂಡರೇ ದೀಪಿಕಾ ಪಡುಕೋಣೆ

06 July 2025

By  Manjunatha

ದೀಪಿಕಾ ಪಡುಕೋಣೆ ಭಾರತದ ಸ್ಟಾರ್ ನಟಿ. ಭಾರತದ ಅತ್ಯಂತ ದುಬಾರಿ ನಟಿಯೂ ಹೌದು.

 ನಟಿ ದೀಪಿಕಾ ಪಡುಕೋಣೆ

ಇತ್ತೀಚೆಗಷ್ಟೆ ತಾಯಿ ಆಗಿರುವ ದೀಪಿಕಾ ಪಡುಕೋಣೆ, ತಾಯಿ ಆದ ಬಳಿಕ ಮತ್ತೆ ಚಿತ್ರರಂಗಕ್ಕೆ ರೀ ಎಂಟ್ರಿ ನೀಡುತ್ತಿದ್ದಾರೆ.

    ಚಿತ್ರರಂಗಕ್ಕೆ ರೀ ಎಂಟ್ರಿ

ಆದರೆ ಹೊಸ ಸಿನಿಮಾಗಳಲ್ಲಿ ನಟಿಸಲು ಹಲವು ಹೊಸ ಷರತ್ತುಗಳನ್ನು ದೀಪಿಕಾ ಪಡುಕೋಣೆ ಇಡುತ್ತಿದ್ದಾರೆ.

   ಷರತ್ತು ವಿಧಿಸಿರುವ ನಟಿ

ಪ್ರಭಾಸ್ ಜೊತೆಗಿನ ‘ಸ್ಪಿರಿಟ್’ ಸಿನಿಮಾಕ್ಕೆ ದೀಪಿಕಾ ಎಂಟು ಗಂಟೆ ಮಾತ್ರ ಕೆಲಸ ಸೇರಿದಂತೆ ಸಂಭಾವನೆಯನ್ನೂ ಹೆಚ್ಚಾಗಿ ಕೇಳಿದ್ದರು.

       ‘ಸ್ಪಿರಿಟ್’ ಸಿನಿಮಾಕ್ಕೆ

ಆದರೆ ಇದು ಇಷ್ಟವಿಲ್ಲದ ಕಾರಣ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ, ದೀಪಿಕಾ ಬದಲಿಗೆ ಬೇರೆ ನಟಿಯನ್ನು ಹಾಕಿಕೊಂಡರು.

    ಸಂದೀಪ್ ರೆಡ್ಡಿ ವಂಗಾ

ಆದರೆ ಈಗ ದೀಪಿಕಾ ಇದೇ ಕಾರಣಕ್ಕೆ ಮತ್ತೊಂದು ತೆಲುಗು ಸಿನಿಮಾ ಕಳೆದುಕೊಂಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಸಿನಿಮಾ ಕಳೆದುಕೊಂಡರು

‘ಕಲ್ಕಿ 2898 ಎಡಿ’ ಸಿನಿಮಾನಲ್ಲಿಯೂ ದೀಪಿಕಾ ಪಡುಕೋಣೆ ನಾಯಕಿ, ಪ್ರಭಾಸ್ ನಾಯಕ. ಈ ಸಿನಿಮಾಕ್ಕೂ ಅದೇ ಷರತ್ತುಗಳನ್ನು ದೀಪಿಕಾ ಹಾಕಿದ್ದಾರೆ.

         ‘ಕಲ್ಕಿ 2898 ಎಡಿ’

ಇದೇ ಕಾರಣಕ್ಕೆ ಸಿನಿಮಾದಿಂದ ದೀಪಿಕಾ ಪಾತ್ರವನ್ನು ಕತ್ತರಿಸಿ, ನಟಿಯನ್ನು ಸಿನಿಮಾದಿಂದ ಹೊರಗೆ ಇಡಲಾಗಿದೆ ಎನ್ನಲಾಗುತ್ತಿದೆ.

   ಸಿನಿಮಾದಿಂದ ಹೊರಕ್ಕೆ