ಮತ್ತೊಮ್ಮೆ ಎಂಟು ಗಂಟೆ ಕೆಲಸದ ಅವಧಿಯ ಬಗ್ಗೆ ದೀಪಿಕಾ ಮಾತು

15 NOV 2025

By  Manjunatha

ದೀಪಿಕಾ ಪಡುಕೋಣೆ, ತಾವು ಇನ್ನುಮುಂದೆ ಕಡ್ಡಾಯವಾಗಿ ದಿನಕ್ಕೆ ಎಂಟು ಗಂಟೆ ಮಾತ್ರವೇ ಕೆಲಸ ಮಾಡುವುದಾಗಿ ಹೇಳಿದ್ದಾರೆ.

     ದೀಪಿಕಾ ಪಡುಕೋಣೆ

ಇದರಿಂದಾಗಿ ದೀಪಿಕಾ ಪಡುಕೋಣೆ ಈಗಾಗಲೇ ‘ಸ್ಪಿರಿಟ್’, ‘ಕಲ್ಕಿ 2’ ಸಿನಿಮಾಗಳನ್ನು ಕಳೆದುಕೊಂಡಿದ್ದಾರೆ.

        ‘ಸ್ಪಿರಿಟ್’, ‘ಕಲ್ಕಿ 2’

ಆದರೆ ಇದಕ್ಕೆಲ್ಲ ಹೆದರದ ದೀಪಿಕಾ ಪಡುಕೋಣೆ ಇದೀಗ ಮತ್ತೊಮ್ಮೆ ಎಂಟು ಗಂಟೆ ಕೆಲಸದ ಅವಧಿಯ ಬಗ್ಗೆ ಮಾತನಾಡಿದ್ದಾರೆ.

   8 ಗಂಟೆ ಕೆಲಸದ ಅವಧಿ

ನಾವು ಅತಿಯಾದ ದುಡಿಮೆಗೆ ಶ್ರಮ, ತ್ಯಾಗ ಎಂದೆಲ್ಲ ಹೇಳುತ್ತೇವೆ, ಅತಿಯಾದ ದುಡಿಮೆ ಕೆಟ್ಟದ್ದು, ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದಿದ್ದಾರೆ.

       ಅತಿಯಾದ ದುಡಿಮೆ

ನನ್ನ ಕಚೇರಿಯಲ್ಲಿ ಸಹ ಎಂಟು ಗಂಟೆ ಮಾತ್ರವೇ ಕೆಲಸದ ಅವಧಿ, ವಾರಕ್ಕೆ ಎರಡು ವಾರ ರಜೆ ಕೊಡುತ್ತೇನೆ ಎಂದಿದ್ದಾರೆ.

     ಎಂಟು ಗಂಟೆ ಮಾತ್ರ

ಅಲ್ಲದೆ ಅವರ ಕಚೇರಿಯಲ್ಲಿ ತಾಯಂದಿರಿಗೆ ಹಾಲುಣಿಸಲು, ಮಕ್ಕಳನ್ನು ಆಡಿಸಲು ಸಹ ವಿಶೇಷ ವ್ಯವಸ್ಥೆ ಮಾಡಿಕೊಟ್ಟಿದ್ದಾರಂತೆ.

    ತಾಯಂದಿರಿಗೆ ಸೌಲಭ್ಯ

ತಾಯಿ ಆದ ಬಳಿಕ ನಾನು ಹೆಚ್ಚು ಗಮನ ಮಗುವಿಗೆ ಕೊಡಬೇಕಿದೆ. ಹಾಗಾಗಿ ಕೆಲವು ನಿಯಮಗಳನ್ನು ಅಳವಡಿಸಿಕೊಂಡಿದ್ದೇನೆ ಎಂದಿದ್ದಾರೆ.

  ಮಗುವಿಗೆ ಹೆಚ್ಚು ಗಮನ 

ದೀಪಿಕಾ ಪಡುಕೋಣೆಯ ಎಂಟು ಗಂಟೆ ಕೆಲಸದ ಅವಧಿ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ಸಾಮಾಜಿಕ ಜಾಲತಾಣದಲ್ಲಿ