ಎರಡು ಸಿನಿಮಾ ಕಳೆದುಕೊಂಡ ಬಳಿಕ ತುಟಿ ಬಿಚ್ಚಿದ ದೀಪಿಕಾ ಪಡುಕೋಣೆ

10 OCT 2025

By  Manjunatha

ನಟಿ ದೀಪಿಕಾ ಪಡುಕೋಣೆ ಬಾಲಿವುಡ್​ ಸೂಪರ್ ಸ್ಟಾರ್ ನಟಿ, ಅತಿ ಹೆಚ್ಚು ಸಂಭಾವನೆ ಪಡೆವ ನಟಿಯೂ ಹೌದು.

 ನಟಿ ದೀಪಿಕಾ ಪಡುಕೋಣೆ

ಇತ್ತೀಚೆಗಷ್ಟೆ ತಾಯಿ ಆಗಿರುವ ದೀಪಿಕಾ ಪಡುಕೋಣೆ ಇದೀಗ ಮತ್ತೆ ಚಿತ್ರೀಕರಣಕ್ಕೆ ಮರಳಿದ್ದಾರೆ. ಆದರೆ ಇದು ನಿರ್ಮಾಪಕರಿಗೆ ಹೊರೆ ಆಗುತ್ತಿದೆ.

ಚಿತ್ರೀಕರಣಕ್ಕೆ ಮರಳಿದ್ದಾರೆ

ತಾಯಿ ಅದ ಬಳಿಕ ದೀಪಿಕಾ ಪಡುಕೋಣೆ ನಿರ್ಮಾಪಕರುಗಳಿಗೆ ಕೆಲವು ಷರತ್ತುಗಳನ್ನು ಹಾಕುತ್ತಿದ್ದಾರೆ. ಇದೇ ಕಾರಣಕ್ಕೆ ದೀಪಿಕಾ ಎರಡು ಸಿನಿಮಾ ಕಳೆದುಕೊಂಡಿದ್ದಾರೆ.

      ದೀಪಿಕಾ ಷರತ್ತುಗಳು

ದಿನಕ್ಕೆ ಎಂಟು ಗಂಟೆ ಮಾತ್ರ ಕೆಲಸ ಮಾಡುವುದು, ಬಂದ ಲಾಭದಲ್ಲಿ ಷೇರು ಪಡೆಯುವುದು ಇನ್ನಿತರೆ ಷರತ್ತುಗಳನ್ನು ದೀಪಿಕಾ ಹಾಕುತ್ತಿದ್ದಾರೆ.

ಎಂಟು ಗಂಟೆ ಮಾತ್ರ ಕೆಲಸ

ಆದರೆ ಈ ಷರತ್ತುಗಳಿಗೆ ಒಪ್ಪದೆ, ಪ್ರಭಾಸ್ ನಟನೆಯ ‘ಸ್ಪಿರಿಟ್’ ಮತ್ತು ‘ಕಲ್ಕಿ 2898 ಎಡಿ’ ಸಿನಿಮಾಗಳಿಂದ ದೀಪಿಕಾರನ್ನು ಕೈಬಿಡಲಾಗಿದೆ.

‘ಸ್ಪಿರಿಟ್’ ‘ಕಲ್ಕಿ 2898 ಎಡಿ’

ಈ ಬಗ್ಗೆ ಮಾತನಾಡಿರುವ ದೀಪಿಕಾ, ‘ನನ್ನ ಹೋರಾಟಗಳನ್ನು ನಾನು ಯಾವಾಗಲೂ ಮೌನವಾಗಿಯೇ ಮಾಡುತ್ತಾ ಬಂದಿದ್ದೇನೆ’ ಎಂದಿದ್ದಾರೆ.

       ಮೌನ ಹೋರಾಟ

ಕೆಲವೊಮ್ಮೆ ಅವು ಸಾರ್ವಜನಿಕವಾಗುತ್ತವೆ ಅದು ನನ್ನ ಮಾದರಿಯಲ್ಲ, ಅದರೆ ನನ್ನ ಹೋರಾಟವನ್ನು ನಾನು ಮುಂದುವರೆಸುತ್ತೇನೆ ಎಂದಿದ್ದಾರೆ.

ಹೋರಾಟ ಮುಂದುವರಿಕೆ

ಸಂಬಳದ ವಿಷಯ ಇನ್ನೂ ಕೆಲವು ವಿಷಯಗಳಿಗಾಗಿ ನಾನು ಮೊದಲಿನಿಂದಲೂ ಹೋರಾಡುತ್ತಲೇ ಬಂದಿದ್ದೇನೆ ಎಂದಿದ್ದಾರೆ ದೀಪಿಕಾ.

   ಸಂಭಾವನೆ ಅಸಮಾನತೆ