‘ಕಲ್ಕಿ 2898 ಎಡಿ’ ಸಿನಿಮಾದಿಂದ ದೀಪಿಕಾ ಪಡುಕೋಣೆ ಹೊರಕ್ಕೆ: ಕಾರಣವೇನು?

18 SEP 2025

By  Manjunatha

ನಟಿ ದೀಪಿಕಾ ಪಡುಕೋಣೆ, ಭಾರತೀಯ ಚಿತ್ರರಂಗದ ಟಾಪ್ ನಟಿ, ಅತಿ ಹೆಚ್ಚು ಸಂಭಾವನೆ ಪಡೆವ ನಟಿಯೂ ಹೌದು.

 ನಟಿ ದೀಪಿಕಾ ಪಡುಕೋಣೆ

ಸಿನಿಮಾ ಹಿನ್ನೆಲೆಯಿಲ್ಲದೆ ಚಿತ್ರರಂಗ ಪ್ರವೇಶಿಸಿ, ಬಾಲಿವುಡ್​​ನ ಸ್ಟಾರ್ ನಟಿ ಎನಿಸಿಕೊಂಡಿದ್ದಾರೆ.

ಹಿನ್ನೆಲೆಯಿಲ್ಲದೆ ಬಂದವರು

ಕನ್ನಡ ಸಿನಿಮಾದಿಂದ ನಟನೆ ಆರಂಭಿಸಿದ ದೀಪಿಕಾ ಪಡುಕೋಣೆ, ಹಲವು ಐಕಾನಿಕ್ ಸಿನಿಮಾಗಳಲ್ಲಿ ನಟಿಸಿದ್ದಾರೆ.

 ನಟಿ ದೀಪಿಕಾ ಪಡುಕೋಣೆ

ಕೆಲ ವರ್ಷಗಳ ಹಿಂದೆ ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’ ಸಿನಿಮಾನಲ್ಲಿ ದೀಪಿಕಾ ಪಡುಕೋಣೆ ನಟಿಸಿದ್ದರು.

         ‘ಕಲ್ಕಿ 2898 ಎಡಿ’

ಆದರೆ ‘ಕಲ್ಕಿ 2898 ಎಡಿ’ ಸಿನಿಮಾದ ಸೀಕ್ವೆಲ್​​ನಿಂದ ದೀಪಿಕಾ ಪಡುಕೋಣೆಯನ್ನು ಹೊರಗಿಡಲಾಗಿದೆ.

ದೀಪಿಕಾ ಹೊರಗಿಡಲಾಗಿದೆ

ದೀಪಿಕಾ ಪಡುಕೋಣೆ, ಕೆಲಸದ ಅವಧಿಯ ಬಗ್ಗೆ ಕಠಿಣ ಷರತ್ತು ಇಟ್ಟಿದ್ದರಿಂದಾಗಿ ನಿರ್ಮಾಣ ಸಂಸ್ಥೆ ಈ ನಿರ್ಧಾರ ತಳೆದಿದೆ.

       ಕೆಲಸದ ಅವಧಿ ಬಗ್ಗೆ

ದೀಪಿಕಾ ಪಡುಕೋಣೆಗೆ ಸಿನಿಮಾ ಬಗ್ಗೆ ಬದ್ಧತೆಯ ಕೊರತೆ ಇದೆ ಎಂದು ನಿರ್ಮಾಣ ಸಂಸ್ಥೆ ಪರೋಕ್ಷ ಟ್ವೀಟ್ ಸಹ ಮಾಡಿದೆ.

 ಪರೋಕ್ಷ ಟ್ವೀಟ್ ಮಾಡಿದೆ

‘ಕಲ್ಕಿ 2898 ಎಡಿ’ ಸಿನಿಮಾದಿಂದ ದೀಪಿಕಾರನ್ನು ಕೈಬಿಡಲಾಗಿದ್ದು, ಆ ಪಾತ್ರವೇ ಇರುವುದಿಲ್ಲ ಎನ್ನಲಾಗುತ್ತಿದೆ.

     ಪಾತ್ರವೇ ಇರುವುದಿಲ್ಲ