ಪೌರಾಣಿಕ ಸಿನಿಮಾನಲ್ಲಿ ದೀಪಿಕಾ ಪಡುಕೋಣೆ, ನಾಯಕ ಯಾರು?

09DEC 2025

By  Manjunatha

ದೀಪಿಕಾ ಪಡುಕೋಣೆ ಬಾಲಿವುಡ್​ನ ಟಾಪ್ ನಟಿ, ತಾಯಿ ಆದ ಬಳಿಕ ಇತ್ತೀಚೆಗೆ ಮತ್ತೆ ನಟನೆ ಆರಂಭಿಸಿದ್ದಾರೆ.

      ದೀಪಿಕಾ ಪಡುಕೋಣೆ

ಆದರೆ ದೀಪಿಕಾ ಪಡುಕೋಣೆ ಇದೀಗ ತಮ್ಮ ಕೆಲಸದ ಅವಧಿಯ ಹೇಳಿಕೆಯಿಂದಾಗಿ ಭಾರಿ ಸುದ್ದಿಯಲ್ಲಿದ್ದಾರೆ.

    ಭಾರಿ ಸುದ್ದಿಯಲ್ಲಿದ್ದಾರೆ

ಎಂಟು ಗಂಟೆ ಮಾತ್ರವೇ ಕೆಲಸ ಮಾಡುವುದು ಎಂದಿರುವ ದೀಪಿಕಾ ಪಡುಕೋಣೆ, ಇದೇ ಕಾರಣಕ್ಕೆ ಎರಡು ದೊಡ್ಡ ಸಿನಿಮಾ ಕಳೆದುಕೊಂಡಿದ್ದಾರೆ.

      ಎಂಟು ಗಂಟೆ ಮಾತ್ರ

ಹೊಸ ನಿಯಮ ಅಳವಡಿಸಿಕೊಂಡ ಬಳಿಕ ದೀಪಿಕಾ ಪಡುಕೋಣೆ ಎರಡು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

    ಎರಡು ಸಿನಿಮಾಗಳಲ್ಲಿ

ಶಾರುಖ್ ಖಾನ್ ನಟನೆಯ ‘ಕಿಂಗ್’ ಸಿನಿಮಾ ಹಾಗೂ ಅಲ್ಲು ಅರ್ಜುನ್ ಜೊತೆಗೆ ಹೊಸ ಸಿನಿಮಾನಲ್ಲಿ ದೀಪಿಕಾ ನಟಿಸುತ್ತಿದ್ದಾರೆ.

 ಅಲ್ಲು ಅರ್ಜುನ್ ಜೊತೆಗೆ

ಇದೀಗ ಮತ್ತೊಂದು ಹೊಸ ಸಿನಿಮಾನಲ್ಲಿ ದೀಪಿಕಾ ಪಡುಕೋಣೆ ನಟಿಸಲಿದ್ದು, ಇದೊಂದು ಪೌರಾಣಿಕ ಕತೆಯ ಸಿನಿಮಾ ಆಗಿದೆ.

ಪೌರಾಣಿಕ ಕತೆಯ ಸಿನಿಮಾ

ಪೌರಾಣಿಕ ಪಾತ್ರವಾಗಿರುವ ಪರಶುರಾಮ ದೇವರ ಕುರಿತಾದ ಸಿನಿಮಾ ನಿರ್ಮಾಣ ಆಗುತ್ತಿದ್ದು, ದೀಪಿಕಾ ಅದರಲ್ಲಿ ನಟಿಸುತ್ತಿದ್ದಾರೆ.

     ಪರಶುರಾಮ ದೇವರು

ಮ್ಯಾಡ್​ಲಾಕ್ ನಿರ್ಮಿಸುತ್ತಿರುವ ಈ ಸಿನಿಮಾನಲ್ಲಿ ವಿಕ್ಕಿ ಕೌಶಲ್ ಪರಶುರಾಮ ದೇವರ ಪಾತ್ರದಲ್ಲಿ ನಟಿಸಲಿದ್ದಾರೆ.

            ವಿಕ್ಕಿ ಕೌಶಲ್