Pic credit - Instagram

Author: Shreelaxmi H

25 Aug 2025

ಕಾರ್ತಿಕ್ ಮಹೇಶ್​ಗೆ ಧ್ರುವ ಸರ್ಜಾ ಸಾತ್

ಕಾರ್ತಿಕ್ ಮಹೇಶ್

ಕಾರ್ತಿಕ್ ಮಹೇಶ್ ಅವರು ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಈಗ ಅವರು ಧ್ರುವ ಸರ್ಜಾ ಅವರನ್ನು ಭೇಟಿ ಮಾಡಿದ್ದಾರೆ. ಅದಕ್ಕೆ ಕಾರಣವೂ ಇದೆ.

ಶಾರ್ಟ್ ಫಿಲ್ಮ್

ಕಾರ್ತಿಕ್ ಮಹೇಶ್ ಅವರು ಶಾರ್ಟ್​ ಫಿಲ್ಮ್ ಮಾಡಿದ್ದಾರೆ. ಇದನ್ನು ಧ್ರುವ ಸರ್ಜಾ ಅವರು ನೋಡಿ ಮೆಚ್ಚಿಕೊಂಡಿದ್ದಾರೆ. ಪಿಆರ್​ಕೆ ಮೂಲಕ ಆಗಸ್ಟ್ 27ರಂದು ರಿಲೀಸ್ ಆಗಲಿದೆ.

ಹೆಸರು ಏನು?

ಈ ಕಿರುಚಿತ್ರದ ಹೆಸರು ‘ಮೋಕ್ಷ ಪಟಂ’ ಎಂದು.  ಕಾರ್ತಿಕ್ ಮಹೇಶ್ ಜೊತೆಗೆ ಬೃಂದಾ ಆಚಾರ್ಯ ಕೂಡ ಇದರಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಅನ್ನೋದು ವಿಶೇಷ.

ಸಿನಿಮಾ

ಕಾರ್ತಿಕ್ ಮಹೇಶ್ ಅವರು ಈ ಮೊದಲು ಬಿಗ್ ಬಾಸ್​​ನಲ್ಲಿ ಕಾಣಿಸಿಕೊಂಡಿದ್ದರು. ಆ ಬಳಿಕ ಅವರನ್ನು ಹುಡುಕಿ ಸಾಕಷ್ಟು ಸಿನಿಮಾ ಆಫರ್​ಗಳು ಬಂದವು.

ಉದ್ಯಮ

ಗೋಲಿಸೋಡಾ ಕಂಪನಿ ಒಂದನ್ನು ಕಾರ್ತಿಕ್ ಮಹೇಶ್ ಆರಂಭಿಸಿದ್ದಾರೆ. ಈ ಮೂಲಕ ಉದ್ಯಮವನ್ನು ಅವರು ವಿಸ್ತರಿಸಿಕೊಂಡಿದ್ದಾರೆ.

ವಿವಿಧ ಸಿನಿಮಾ

ಕೆಲವು ಸಿನಿಮಾ ಕೆಲಸಗಳಲ್ಲಿ ಕಾರ್ತಿಕ್ ಮಹೇಶ್ ಅವರು ಗುರುತಿಸಿಕೊಂಡಿದ್ದಾರೆ. ಅವರ ಜನಪ್ರಿಯತೆ ದಿನ ಕಳೆದಂತೆ ಹೆಚ್ಚುತ್ತಿದೆ.

ವೆಬ್ ಸೀರಿಸ್

ವೆಬ್ ಸೀರಿಸ್ ಒಂದರಲ್ಲಿ ಕಾರ್ತಿಕ್ ಮಹೇಶ್ ನಟಿಸೋ ಸಾಧ್ಯತೆ ಇದೆ. ಇದರ ಕುರಿತು ಮಾತುಕತೆಗಳು ಕೂಡ ನಡೆಯುತ್ತಿವೆಯಂತೆ. ಇದು ಸೆಟ್ಟೋರೋದು ಯಾವಾಗ ಇನ್ನೂ ಅಧಿಕೃತವಾಗಿಲ್ಲ.

ಸುತ್ತಾಟ

ಕಾರ್ತಿಕ್ ಮಹೇಶ್ ಅವರಿಗೆ ಸುತ್ತಾಟ ಎಂದರೆ ಬಲುಖುಷಿ. ಈ ಕಾರಣದಿಂದ ಅವರು ಸಮಯ ಸಿಕ್ಕಾಗಲೆಲ್ಲ ಸುತ್ತಾಟ ನಡೆಸುತ್ತಲೇ ಇರುತ್ತಾರೆ.