ವಿವಾದಿತ ಯೂಟ್ಯೂಬರ್ ಜೊತೆಗೆ ನಟಿ ಮೃಣಾಲ್ ಠಾಕೂರ್ ಡೇಟಿಂಗ್?

09 June 2026

By  Manjunatha

ಮೃಣಾಲ್ ಠಾಕೂರ್ ಸ್ಟಾರ್ ಪ್ಯಾನ್ ಇಂಡಿಯಾ ನಟಿಯರಲ್ಲಿ ಒಬ್ಬರು. ಅವರ ಗ್ಲಾಮರ್​​ಗೆ ಫಿದಾ ಆಗದವರು ಕಡಿಮೆ.

    ಪ್ಯಾನ್ ಇಂಡಿಯಾ ನಟಿ

ಇತ್ತೀಚೆಗಷ್ಟೆ ಮೃಣಾಲ್ ಠಾಕೂರ್ ನಟನೆಯ ‘ಹೇ ಜವಾನಿ ತೊ ಇಷ್ಕ್ ಹೋನಾ ಹೈ’ ಹೆಸರಿನ ಸಿನಿಮಾ ಬಿಡುಗಡೆ ಆಗಿದೆ.

 ಸಿನಿಮಾ ಬಿಡುಗಡೆ ಆಗಿದೆ

ಆದರೆ ಇತ್ತೀಚೆಗೆ ಮೃಣಾಲ್ ಠಾಕೂರ್ ಅವರ ಚಿತ್ರವೊಂದು ವೈರಲ್ ಆಗಿದ್ದು, ಮೃಣಾಲ್ ಅವರ ಡೇಟಿಂಗ್ ಲೈಫ್ ಬಗ್ಗೆ ಚರ್ಚೆ ಶುರುವಾಗಿದೆ.

ಮೃಣಾಲ್ ಡೇಟಿಂಗ್ ಲೈಫ್

ಮೃಣಾಲ್ ಠಾಕೂರ್ ಅವರು ವಿವಾದಾತ್ಮಕ ಯೂಟ್ಯೂಬರ್ ಎಲ್ವಿಶ್ ಯಾದವ್ ಜೊತೆ ರೆಸ್ಟೊರೆಂಟ್​​ನಲ್ಲಿ ಕೂತಿರುವ ಚಿತ್ರ, ವಿಡಿಯೋ ವೈರಲ್ ಆಗಿದೆ.

  ಯೂಟ್ಯೂಬರ್ ಎಲ್ವಿಶ್

ಮೃಣಾಲ್ ಅವರು ಎಲ್ವಿಶ್ ಯಾದವ್ ಅವರೊಟ್ಟಿಗೆ ಡೇಟಿಂಗ್​​ನಲ್ಲಿದ್ದಾರೆ ಎಂಬ ಸುದ್ದಿಗಳು ಹರಿದಾಡಲು ಆರಂಭವಾಗಿವೆ.

 ಸುದ್ದಿಗಳು ಹರಿದಾಡುತ್ತಿವೆ

ಆದರೆ ನಿಜಾಂಶ ಬೇರೆಯೇ ಇದೆ. ಇದೀಗ ವೈರಲ್ ಆಗಿರುವ ಚಿತ್ರ, ವಿಡಿಯೋ ಎಐ ಜನರೇಟೆಡ್ ಆಗಿದೆಯಂತೆ.

ಎಐ ಜನರೇಟೆಡ್ ವಿಡಿಯೋ

ಮೃಣಾಲ್ ಠಾಕೂರ್ ಅವರು ಎಲ್ವಿಶ್ ಅವರೂ ಸಹ ಇರುವ ಟಿವಿ ಕಾರ್ಯಕ್ರಮಕ್ಕೆ ಇತ್ತೀಚೆಗೆ ಅತಿಥಿಯಾಗಿ ಹೋಗಿದ್ದರು.

 ಅತಿಥಿಯಾಗಿ ಹೋಗಿದ್ದರು

ಆದರೆ ಎಲ್ವಿಶ್ ಅವರ ಅಭಿಮಾನಿಗಳು, ಮೃಣಾಲ್ ಅವರ ನಕಲಿ ವಿಡಿಯೋ ಮಾಡಿ ಹರಿಯಬಿಟ್ಟಿದ್ದಾರೆ.

        ನಕಲಿ ವಿಡಿಯೋ