ಪೂಜಾ ಹೆಗ್ಡೆ ಮತ್ತೊಂದು ತೆಲುಗು ಸಿನಿಮಾ, ಅದೃಷ್ಟ ಖುಲಾಯಿಸುತ್ತಾ?

25 SEP 2025

By  Manjunatha

ನಟಿ ಪೂಜಾ ಹೆಗ್ಡೆ ಕೆಲ ವರ್ಷಗಳ ಹಿಂದಿನವರೆಗೂ ತೆಲುಗು ಚಿತ್ರರಂಗದ ಟಾಪ್ ನಟಿಯಾಗಿದ್ದರು.

       ನಟಿ ಪೂಜಾ ಹೆಗ್ಡೆ

ಅಲ್ಲು ಅರ್ಜುನ್, ಪ್ರಭಾಸ್, ರಾಮ್ ಚರಣ್, ಜೂ ಎನ್​​ಟಿಆರ್ ಅಂಥಹಾ ಸ್ಟಾರ್ ನಟರೊಟ್ಟಿಗೆ ನಟಿಸಿದ್ದಾರೆ.

  ಸ್ಟಾರ್ ನಟರುಗಳ ಜೊತೆ

ಆದರೆ ಕೋವಿಡ್ ಬಳಿಕ ಪೂಜಾ ಹೆಗ್ಡೆಗೆ ತೆಲುಗಿನಂದ ಅವಕಾಶಗಳು ಬರುವುದೇ ನಿಂತು ಹೋಗಿತ್ತು.

    ತೆಲುಗಿನಂದ ಅವಕಾಶ

ಅಘೋಷಿತ ನಿಷೇಧವನ್ನು ತೆಲುಗು ಚಿತ್ರರಂಗ ಪೂಜಾ ಹೆಗ್ಡೆ ಮೇಲೆ ಹೇರಿದೆ ಎಂಬ ಮಾತುಗಳು ಕೇಳಿ ಬಂದವು.

      ಅಘೋಷಿತ ನಿಷೇಧ

ಈಗ ನಾಲ್ಕು ವರ್ಷಗಳ ಬಳಿಕ ಪೂಜಾ ಹೆಗ್ಡೆಗೆ ತೆಲುಗು ಸಿನಿಮಾ ಆಫರ್ ದೊರೆತಿದೆ. ದುಲ್ಕರ್ ಜೊತೆ ಅವರು ನಟಿಸುತ್ತಿದ್ದಾರೆ.

   ತೆಲುಗು ಸಿನಿಮಾ ಆಫರ್

ದುಲ್ಕರ್ ಸಲ್ಮಾನ್ ಜೊತೆಗಿನ ಸಿನಿಮಾದ ಚಿತ್ರೀಕರಣ ಈಗಾಗಲೇ ಶುರುವಾಗಿದ್ದು, ಚಿತ್ರೀಕರಣ ನಡೆಯುತ್ತಿದೆ.

    ಸಿನಿಮಾದ ಚಿತ್ರೀಕರಣ

ಇದರ ನಡುವೆ ಪೂಜಾ ಹೆಗ್ಡೆಗೆ ಈಗ ಮತ್ತೊಂದು ತೆಲುಗು ಸಿನಿಮಾ ಆಫರ್ ಬಂದಿದೆ ಎನ್ನಲಾಗುತ್ತಿದೆ.

  ಹೊಸ ತೆಲುಗು ಸಿನಿಮಾ

ಪ್ರಸ್ತುತ ಪೂಜಾ ಕೈಯಲ್ಲಿ ಎರಡು ತೆಲುಗು ಸಿನಿಮಾ, ಎರಡು ತಮಿಳು ಸಿನಿಮಾ ಹಾಗೂ ಒಂದು ಹಿಂದಿ ಸಿನಿಮಾ ಇದೆ.

     ಹಲವು ಸಿನಿಮಾಗಳಿವೆ