ಸಮಂತಾ ಕೈಲಿರುವ ಸಿನಿಮಾ ನಿಂತು ಹೋಯ್ತೆ? ಕತೆ ಏನು?

24 AUG 2025

By  Manjunatha

ಸಮಂತಾ ತೆಲುಗು ಚಿತ್ರರಂಗದ ಟಾಪ್ ನಟಿಯಾಗಿ ಮೆರೆದವರು, ಕೆಲ ವರ್ಷಗಳ ಹಿಂದಿನ ವರೆಗೂ ಬೇಡಿಕೆ ಇತ್ತು ಅವರಿಗೆ.

    ಸಮಂತಾ ಋತ್ ಪ್ರಭು

ಆದರೆ ಇತ್ತೀಚೆಗೆ ಸಮಂತಾಗೆ ಅವಕಾಶಗಳು ಧಾರುಣವಾಗಿ ಕಡಿಮೆ ಆಗಿವೆ ಎನ್ನಲಾಗುತ್ತಿದೆ. ಇದನ್ನು ಅವರೇ ಹೇಳಿದ್ದಾರೆ.

   ಅವಕಾಶ ಕಡಿಮೆ ಆಗಿವೆ

ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಇತ್ತೀಚೆಗೆ ನನಗೆ ಯಾರೂ ಹೊಸ ತೆಲುಗು ಸಿನಿಮಾ ಆಫರ್ ನೀಡುತ್ತಿಲ್ಲ ಎಂದಿದ್ದಾರೆ.

ಅವರೇ ಹೇಳಿಕೊಂಡಿದ್ದರು

ಸಮಂತಾ ‘ಮಾ ಇಂಟಿ ಬಂಗಾರಂ’ ಸಿನಿಮಾ ಪ್ರಾರಂಭಿಸಿ ವರ್ಷವಾಗುತ್ತಾ ಬಂತು. ಚಿತ್ರೀಕರಣವೇ ಮುಗಿದಿಲ್ಲ.

     ಮಾ ಇಂಟಿ ಬಂಗಾರಂ

ಕೆಲ ಮೂಲಗಳ ಪ್ರಕಾರ ‘ಮಾ ಇಂಟಿ ಬಂಗಾರಂ’ ಸಿನಿಮಾದ ಚಿತ್ರೀಕರಣ ಬಂದ್ ಆಗಿದ್ದು ಸಿನಿಮಾ ಬಿಡುಗಡೆ ಆಗೊಲ್ಲವಂತೆ.

      ಚಿತ್ರೀಕರಣ ಬಂದ್?

ನಂದಿನಿ ರೆಡ್ಡಿ ಅವರು ಈ ಸಿನಿಮಾ ನಿರ್ದೇಶನ ಆರಂಭಿಸಿದ್ದರು. ಆದರೆ ಸಮಂತಾ ಜೊತೆಗಿನ ಭಿನ್ನಾಭಿಪ್ರಾಯದಿಂದ ಸಿನಿಮಾ ನಿಂತಿದೆಯಂತೆ.

 ಭಿನ್ನಾಭಿಪ್ರಾಯ ಮೂಡಿದೆ

ಸಮಂತಾ ಪ್ರಸ್ತುತ ಹಿಂದಿ ವೆಬ್ ಸರಣಿಯೊಂದನ್ನು ನಟಿಸುತ್ತಿದ್ದಾರೆ. ಅದನ್ನು ರಾಜ್-ಡಿಕೆ ನಿರ್ಮಿಸುತ್ತಿದ್ದಾರೆ.

  ವೆಬ್ ಸರಣಿಯಲ್ಲಿ ನಟನೆ

ಸಮಂತಾ ಹಾರರ್ ವೆಬ್ ಸರಣಿಯಾದ ‘ರಕ್ತ ಬ್ರಹ್ಮಾಂಡ್’ನಲ್ಲಿ ನಟಿಸಿದ್ದಾರೆ. ವೆಬ್ ಸರಣಿ ಶೀಘ್ರ ಬಿಡುಗಡೆ ಆಗಲಿದೆ.

      ರಕ್ತ ಬ್ರಹ್ಮಾಂಡ್’ನಲ್ಲಿ