ಬಾಲಿವುಡ್​ ಸಿನಿಮಾ ಆಸೆಗೆ ತೆಲುಗು ಸಿನಿಮಾ ಕೈಬಿಟ್ಟ ನಟಿ ಶ್ರೀಲೀಲಾ

25 June 2025

By  Manjunatha

ಕನ್ನಡತಿ ನಟಿ ಶ್ರೀಲೀಲಾ ಕನ್ನಡ ಸಿನಿಮಾದಿಂದ ವೃತ್ತಿ ಆರಂಭಿಸಿ ಈಗ ತೆಲುಗು ಹಾಗೂ ಬಾಲಿವುಡ್​ನಲ್ಲಿ ಸಖತ್ ಬ್ಯುಸಿಯಾಗಿದ್ದಾರೆ.

   ಕನ್ನಡತಿ ನಟಿ ಶ್ರೀಲೀಲಾ

ಕಡಿಮೆ ಅವಧಿಯಲ್ಲೇ ತೆಲುಗಿನ ಟಾಪ್ ನಟಿಯಾಗಿ ಗುರುತಿಸಿಕೊಂಡ ಶ್ರೀಲೀಲಾ, ಬಾಲಿವುಡ್​ಗೆ ಪದಾರ್ಪಣೆ ಮಾಡಿದ್ದು ಅಲ್ಲಿಯೂ ಬೇಡಿಕೆ ಹೆಚ್ಚಿದೆ.

      ತೆಲುಗಿನ ಟಾಪ್ ನಟಿ

ಈಗ ಬಾಲಿವುಡ್ ಅವಕಾಶಗಳು ಒಂದರ ಹಿಂದೊಂದರಂತೆ ಶ್ರೀಲೀಲಾ ಅವರನ್ನು ಅರಸಿ ಬರುತ್ತಿವೆ.

 ಬಾಲಿವುಡ್ ಅವಕಾಶಗಳು

ಬಾಲಿವುಡ್​ ಸಿನಿಮಾಕ್ಕಾಗಿ ನಟಿ ಶ್ರೀಲೀಲಾ, ತೆಲುಗು ಸಿನಿಮಾ ಅವಕಾಶವನ್ನು ಕೈಬಿಟ್ಟಿದ್ದಾರೆ ಎನ್ನಲಾಗುತ್ತಿದೆ.

   ಅವಕಾಶ ಕೈಬಿಟ್ಟಿದ್ದಾರೆ

ಅಕ್ಕಿನೇನಿ ಅಖಿಲ್ ನಟನೆಯ ಹೊಸ ಸಿನಿಮಾ ‘ಲೆನಿನ್’ನಲ್ಲಿ ಶ್ರೀಲೀಲಾ ನಾಯಕಿಯಾಗಿ ಆಯ್ಕೆ ಆಗಿದ್ದರು.

‘ಲೆನಿನ್’ ಶ್ರೀಲೀಲಾ ನಾಯಕಿ

ಆದರೆ ಬಾಲಿವುಡ್ ಸಿನಿಮಾದ ಅವಕಾಶ ಒಂದು ಬಂದಿರುವ ಕಾರಣದಿಂದಾಗಿ ‘ಲೆನಿನ್’ ಸಿನಿಮಾದಿಂದ ಶ್ರೀಲೀಲಾ ಹೊರಗೆ ಬಂದಿದ್ದಾರೆ.

ಹಿಂದಿ ಸಿನಿಮಾದ ಅವಕಾಶ

ಶ್ರೀಲೀಲಾ ಈ ಹಿಂದೆ ವಿಜಯ್ ದೇವರಕೊಂಡ ನಟನೆಯ ಹೊಸ ಸಿನಿಮಾ ಒಂದರಿಂದಲೂ ಹೊರಬಂದಿದ್ದರು ಎನ್ನಲಾಗಿತ್ತು.

   ವಿಜಯ್ ದೇವರಕೊಂಡ

ಶ್ರೀಲೀಲಾ ಕೈಯಲ್ಲಿ ಈಗ ಮೂರು ಹಿಂದಿ ಸಿನಿಮಾ ಒಂದು ತಮಿಳು ಸಿನಿಮಾ ಹಾಗೂ ಎರಡು ತೆಲುಗು ಸಿನಿಮಾಗಳಿವೆ.

ಕೈಯಲ್ಲಿರುವ ಸಿನಿಮಾಗಳು