ದಿಶಾ ಪಟಾನಿಯ ಫಿಟ್ ದೇಹದ ಗುಟ್ಟೇನು? ಇಲ್ಲಿದೆ ಮಾಹಿತಿ

03 AUG 2025

By  Manjunatha

ದಿಶಾ ಪಟಾನಿ ಬಾಲಿವುಡ್​ನ ಅತ್ಯಂತ ಫಿಟ್ ಮತ್ತು ಫ್ಲೆಕ್ಸಿಬಲ್ ಮತ್ತು ಗ್ಲಾಮರಸ್ ನಟಿ.

     ಗ್ಲಾಮರಸ್ ನಟಿ ದಿಶಾ

ದಿಶಾ ಪಟಾನಿ ಸಪೂರವಾದ ದೇಹವನ್ನು ಹೊಂದಿದ್ದಾರೆ. ತಮ್ಮ ದೇಹವನ್ನು ತೋರಿಸಲು ಅವರು ಹಿಂಜರಿಯುವುದಿಲ್ಲ.

       ಸಪೂರವಾದ ದೇಹ

ಆದರೆ ಹೀಗೆ ಫಿಟ್ ಮತ್ತು ಫ್ಲೆಕ್ಸಿಬಲ್ ದೇಹ ಹೊಂದಲು ದಿಶಾ ಪಟಾನಿ ಸಾಕಷ್ಟು ಕಸರತ್ತು ಮತ್ತು ಡಯಟ್ ಫಾಲೋ ಮಾಡುತ್ತಾರೆ.

 ಕಸರತ್ತು ಮತ್ತು ಡಯಟ್

ದಿಶಾ ಪಟಾನಿ ಬೆಳಿಗ್ಗೆ ಎದ್ದ ಕೂಡಲೆ ನಿಂಬೆ ಹಿಂಡಿದ ಬಿಸಿ ನೀರು ಸೇವನೆ ಮಾಡುತ್ತಾರೆ ಆ ನಂತರ ವ್ಯಾಯಾಮ.

ನಿಂಬೆ ಹಿಂಡಿದ ಬಿಸಿ ನೀರು

ಬೆಳಗಿನ ತಿಂಡಿಗೆ ವೀಟ್ ಬ್ರೆಡ್ ಮತ್ತು ಮೂರು ಎಗ್ ವೈಟ್ ಯುಕ್ತ ಆಮ್ಲೆಟ್, ಗ್ರೀನ್ ಟೀ ಸಹ ಜೊತೆಗೆ.

    ಬೆಳಗಿನ ತಿಂಡಿಗೆ ಏನು?

ಮಧ್ಯಾಹ್ನ ಊಟಕ್ಕೆ ಮುಂಚೆ ಹಣ್ಣುಗಳು ಸೇವಿಸುತ್ತಾರೆ. ಅದರ ಜೊತೆಗೆ ತುಸು ಒಣಹಣ್ಣುಗಳನ್ನು ಸಹ ತಿನ್ನುತ್ತಾರೆ.

ಮಧ್ಯಾಹ್ನ ಊಟಕ್ಕೆ ಏನು?

ಮಧ್ಯಾಹ್ನ ಊಟಕ್ಕೆ ಬೇಯಿಸಿದ ಚಿಕನ್ 100 ಗ್ರಾಂ, ಬೇಯಿಸಿದ ತರಕಾರಿ, ಬ್ರೌನ್ ರೈಸ್ ಒಂದು ಚಪಾತಿ ಸೇವಿಸುತ್ತಾರೆ.

ಮಧ್ಯಾಹ್ನ ಊಟಕ್ಕೆ ಏನು?

ಸಂಜೆ ಹಣ್ಣಿನ ಜ್ಯೂಸು, ಒಣ ಹಣ್ಣುಗಳನ್ನು ಸೇವನೆ ಮಾಡುತ್ತಾರೆ. ತಣ್ಣನೆಯ ನೀರನ್ನು ದಿನಪೂರ್ತಿ ಸೇವಿಸುತ್ತಾರೆ.

    ಸಂಜೆ ಹಣ್ಣಿನ ಜ್ಯೂಸು

ರಾತ್ರಿ ಊಟಕ್ಕೆ 100 ಗ್ರಾಂ ಫಿಶ್, ಕಿನುವಾ ಸಾಲಡ್, ಬೇಯಿಸಿದ ಬ್ರಾಕ್ಲಿ, ಕ್ಯಾರೆಟ್ ಗಳನ್ನು ಸೇವನೆ ಮಾಡುತ್ತಾರೆ.

     ರಾತ್ರಿ ಊಟಕ್ಕೆ ಏನು?