ಶ್ರೀಲೀಲಾ ಕೈಯಲ್ಲಿರುವ ಸಿನಿಮಾಗಳ ಸಂಖ್ಯೆ ಎಷ್ಟು ಗೊತ್ತೆ?

16 NOV 2025

By  Manjunatha

ಕನ್ನಡ ಸಿನಿಮಾಗಳಿಂದ ನಟನೆ ಆರಂಭಿಸಿದ ಬೆಂಗಳೂರಿನ ಹುಡುಗಿ ಶ್ರೀಲೀಲಾ ಈಗ ಪ್ಯಾನ್ ಇಂಡಿಯಾ ಬೇಡಿಕೆಯ ನಟಿ.

  ಪ್ಯಾನ್ ಇಂಡಿಯಾ ನಟಿ

ತೆಲುಗಿನಲ್ಲಿ ಅತ್ಯಂತ ಕಡಿಮೆ ಅವಧಿಯಲ್ಲಿ ಬೇಡಿಕೆಯ ನಟಿಯಾಗಿ ಗುರುತಿಸಿಕೊಂಡ ಶ್ರೀಲೀಲಾ ಈಗ ಬಾಲಿವುಡ್​​ನಲ್ಲೂ ಬೇಡಿಕೆಯ ನಟಿಯಾಗಿದ್ದಾರೆ.

 ಬೇಡಿಕೆಯ ನಟಿಯಾದರು

ಶ್ರೀಲೀಲಾ ಕೈಯಲ್ಲಿ ಈಗ ಹಲವಾರು ಸಿನಿಮಾಗಳಿವೆ. ಒಂದರ ಹಿಂದೊಂದರಂತೆ ಬಿಡುವಿಲ್ಲದೆ ಸಿನಿಮಾಗಳನ್ನು ಶ್ರೀಲೀಲಾ ಒಪ್ಪಿಕೊಳ್ಳುತ್ತಿದ್ದಾರೆ.

 ಹಲವಾರು ಸಿನಿಮಾಗಳಿವೆ

ಶ್ರೀಲೀಲಾ, ಪವನ್ ಕಲ್ಯಾಣ್ ನಟನೆಯ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಕೆಲವೇ ದಿನಗಳ ಚಿತ್ರೀಕರಣ ಬಾಕಿ ಇದೆ.

    ಉಸ್ತಾದ್ ಭಗತ್ ಸಿಂಗ್

ಹಿಂದಿಯಲ್ಲಿ ಕಾರ್ತಿಕ್ ಆರ್ಯನ್ ನಾಯಕರಾಗಿರುವ ‘ಆಶಿಖಿ 3’ ಸಿನಿಮಾನಲ್ಲಿ ಶ್ರೀಲೀಲಾ ನಟಿಸುತ್ತಿದ್ದಾರೆ. ಅನುರಾಗ್ ಬಾಸು ನಿರ್ದೇಶಕ.

       ‘ಆಶಿಖಿ 3’ ಸಿನಿಮಾ

ತಮಿಳಿನಲ್ಲಿ ರಾಷ್ಟ್ರಪ್ರಶಸ್ತಿ ವಿಜೇತ ಸುಧಾ ಕೊಂಗರ ನಿರ್ದೇಶನದ ‘ಪರಾಶಕ್ತಿ’ ಸಿನಿಮಾನಲ್ಲಿ ಶಿವಕಾರ್ತಿಕೇಯನ್ ಜೊತೆ ನಟಿಸುತ್ತಿದ್ದಾರೆ.

       ‘ಪರಾಶಕ್ತಿ’ ಸಿನಿಮಾ

ಇದೀಗ ತಮಿಳಿನಲ್ಲಿ ಶಿವಕಾರ್ತಿಕೇಯನ್ ನಟಿಸಲಿರುವ ಹೊಸ ಹಾಸ್ಯ ಮಿಶ್ರಿತ ಆಕ್ಷನ್ ಸಿನಿಮಾಕ್ಕೂ ಶ್ರೀಲೀಲಾ ಅವರೇ ನಾಯಕಿ.

 ಮತ್ತೊಂದು ತಮಿಳು ಚಿತ್ರ

ಹಿಂದಿಯಲ್ಲಿ ಸೈಫ್ ಅಲಿ ಖಾನ್ ಪುತ್ರ ನಟಿಸಲಿರುವ ಹೊಸ ಸಿನಿಮಾಕ್ಕೆ ಶ್ರೀಲೀಲಾ ನಾಯಕಿಯಾಗಿ ಆಯ್ಕೆ ಆಗಿದ್ದಾರೆ.

   ಸೈಫ್ ಅಲಿ ಖಾನ್ ಪುತ್ರ