ಇನ್​​ಸ್ಟಾಗ್ರಾಂ ರೀಲಿನಿಂದ ಸಂಕಷ್ಟ, ನೋರಾ ಮೇಲೆ 3 ಕೋಟಿಗೆ ಮೊಕದ್ದಮೆ

09 SEP 2026

By  Manjunatha

ನೋರಾ ಫತೇಹಿ, ಬಾಲಿವುಡ್​​ನ ಹಾಟ್ ನಟಿ, ಈಗ ಅಂತರಾಷ್ಟ್ರೀಯ ಆರ್ಟಿಸ್ಟ್ ಸಹ ಹೌದು.

     ನಟಿ ನೋರಾ ಫತೇಹಿ

ಕನ್ನಡದ ‘ಕೆಡಿ’ ಸಿನಿಮಾದ ‘ಸರ್ಸೆ ಸೆರಗು’ ಹಾಡಿನಿಂದ ವಿವಾದದಲ್ಲಿ ಸಿಲುಕಿಕೊಂಡಿದ್ದರು ನಟಿ ನೋರಾ.

     ‘ಸರ್ಸೆ ಸೆರಗು’ ಹಾಡು

ಒಂದು ಸಮಯವಿತ್ತು, ನಾಯಕ-ನಾಯಕಿಯರು ವರ್ಷಕ್ಕೆ ಹತ್ತು-ಹದಿನೈದು ಸಿನಿಮಾಗಳಲ್ಲಿ ನಟನೆ ಮಾಡುತ್ತಿದ್ದರು.

ಹತ್ತು-ಹದಿನೈದು ಸಿನಿಮಾ

ಇದೀಗ ನೋರಾ ಫತೇಹಿ ಮತ್ತೊಂದು ವಿವಾದಕ್ಕೆ ಸಿಲುಕಿಕೊಂಡಿದ್ದಾರೆ. ಈ ಬಾರಿ ತುಸು ದೊಡ್ಡ ವಿವಾದವೇ ತಗುಲಿಕೊಂಡಿದೆ.

      ಮತ್ತೊಂದು ವಿವಾದ

ನೋರಾ ಫತೇಹಿ ಖಾಸಗಿ ಚಾರ್ಟೆಡ್ ವಿಮಾನ ಒಂದರಲ್ಲಿ ಪ್ರಯಾಣಿಸಿದ್ದರು. ಆದರೆ ಅವರಿಗೆ ವಿಮಾನ ಇಷ್ಟವಾಗಿರಲಿಲ್ಲ.

ಖಾಸಗಿ ಚಾರ್ಟೆಡ್ ವಿಮಾನ

ಇದೇ ಕಾರಣಕ್ಕೆ ನೋರಾ ಫತೇಹಿ ಆ ವಿಮಾನವನ್ನು ಆಟಿಕೆ, ಮಿನಿಯೇಚರ್, ಲೆಗೋ ಪ್ಲೇನ್ ಎಂದು ಟೀಕಿಸಿದ್ದರು.

     ವಿಮಾನದ ಬಗ್ಗೆ ಟೀಕೆ

ಆ ವಿಮಾನದ ಸಂಸ್ಥೆ ಡ್ಯೂನ್ ಏವಿಯೇಷನ್ಸ್ ನೋರಾ ಫತೇಹಿ ವಿರುದ್ಧ ಮೊಕದ್ದಮೆ ದಾಖಲು ಮಾಡಿದೆ.

    ಡ್ಯೂನ್ ಏವಿಯೇಷನ್ಸ್

ಸರ್ಕಾರಿ ನಿಯಮದ ಪ್ರಕಾರ ಹಾರಲು ಯೋಗ್ಯವಾಗಿರುವ ವಿಮಾನದ ಬಗ್ಗೆ ದುರುದ್ದೇಶಪೂರಿತ ಟೀಕೆ ಮಾಡಿದ್ದಾರೆಂದು ಆರೋಪಿಸಿದೆ.

ಸರ್ಕಾರಿ ನಿಯಮದ ಪ್ರಕಾರ

ಮಾತ್ರವಲ್ಲದೆ ನಟಿ ನೋರಾ ಫತೇಹಿ ವಿರುದ್ಧ ಮೂರು ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ದಾಖಲಿಸಿದೆ.

ಮೂರು ಕೋಟಿ ರೂಪಾಯಿ