ಹಾರ್ದಿಕ್ ಪಾಂಡ್ಯಾ ಜೊತೆ ಡೇಟಿಂಗ್? ಇಶಾ ಗುಪ್ತಾ ಹೇಳಿದ್ದೇನು?

24 June 2025

By  Manjunatha

ಕ್ರಿಕೆಟಿಗರು ಹಾಗೂ ಸಿನಿಮಾ ನಟಿಯರು ಡೇಟಿಂಗ್, ಪ್ರೀತಿ, ಮದುವೆ ಇತ್ಯಾದಿ ಮಾಡಿಕೊಳ್ಳುವುದು ಹೊಸದೇನೂ ಅಲ್ಲ.

   ಕ್ರಿಕೆಟಿಗರು -  ನಟಿಯರು

ಹಲವಾರು ಕ್ರಿಕೆಟ್ ಆಟಗಾರರು ಸಿನಿಮಾ ನಟಿಯರನ್ನು ಮದುವೆ ಆಗಿ ಸಂಸಾರ ನಡೆಸುತ್ತಿದ್ದಾರೆ.

ಕ್ರಿಕೆಟ್-ಸಿನಿಮಾ ದಾಂಪತ್ಯ

ಕ್ರಿಕೆಟಿಗರು ಸಿನಿಮಾ ನಟಿಯರೊಟ್ಟಿಗೆ ಡೇಟಿಂಗ್ ಮಾಡಿದ್ದಕ್ಕಂತೂ ಲೆಕ್ಕವೇ ಇಲ್ಲ. ಹಿರಿಯ ಆಟಗಾರರು ಸಹ ನಟಿಯರೊಟ್ಟಿಗೆ ಪ್ರೀತಿಗೆ ಬಿದ್ದಿದ್ದರು.

ನಟಿಯರೊಟ್ಟಿಗೆ ಡೇಟಿಂಗ್

ಹಾರ್ದಿಕ್ ಪಾಂಡ್ಯಾ ನಟಿಯೊಬ್ಬರನ್ನು ಮದುವೆಯಾಗಿ, ಮಗು ಪಡೆದು ಈಗ ಡೈವೊರ್ಸ್ ಸಹ ಪಡೆದುಕೊಂಡಿದ್ದಾರೆ.

       ಹಾರ್ದಿಕ್ ಪಾಂಡ್ಯಾ

ಪ್ಲೇಬಾಯ್ ಇಮೇಜಿನ ಹಾರ್ದಿಕ್ ಪಾಂಡ್ಯಾ ಇನ್ನೂ ಕೆಲವು ನಟಿಯರೊಟ್ಟಿಗೆ ಡೇಟಿಂಗ್ ನಡೆಸಿದ್ದರು. ಅವರಲ್ಲಿ ಇಶಾ ಗುಪ್ತಾ ಒಬ್ಬರು.

     ಪ್ಲೇಬಾಯ್ ಇಮೇಜು

ಸ್ವತಃ ನಟಿ ಇಶಾ ಗುಪ್ತಾ ಈ ವಿಷಯದ ಬಗ್ಗೆ ಮಾತನಾಡಿದ್ದು, ಕೆಲ ಸಮಯ ನಾವಿಬ್ಬರೂ ಡೇಟಿಂಗ್ ಮಾಡಿದ್ದು ನಿಜ ಎಂದಿದ್ದಾರೆ.

         ನಟಿ ಇಶಾ ಗುಪ್ತಾ

ಕೆಲ ಸಮಯ ನಾವು ಪರಸ್ಪರ ಮಾತನಾಡಿದೆವು, ಇಬ್ಬರೂ ಒಟ್ಟಿಗೆ ಇರಬೇಕು, ಇರಬಾರದು ಎಂದುಕೊಳ್ಳುವವರೆಗೆ ವಿಷಯ ಬಂದಿತ್ತು ಎಂದಿದ್ದಾರೆ.

       ಪರಸ್ಪರ ಮಾತುಕತೆ

ಒಂದೆರಡು ಬಾರಿ ಪರಸ್ಪರ ಭೇಟಿ ಆಗಿದ್ದೆವು, ಮೆಸೇಜ್ ಕಾಲ್ ನಡೆಯುತ್ತಲೇ ಇತ್ತು, ಆದರೆ ಯಾಕೋ ಪರಸ್ಪರ ವರ್ಕೌಟ್ ಆಗಲಿಲ್ಲ ಎಂದಿದ್ದಾರೆ.

  ಮೆಸೇಜ್, ಕಾಲ್ ಎಲ್ಲವೂ