‘ನಯನತಾರಾ’ ಡಾಕ್ಯುಮೆಂಟರಿ ವಿವಾದ, ಐದು ಕೋಟಿಗೆ ಬೇಡಿಕೆ

08 July 2025

By  Manjunatha

ದಕ್ಷಿಣ ಭಾರತದ ಸ್ಟಾರ್ ನಟಿ ನಯನತಾರಾ, ಅವರಿಗೆ ಸಾಕಷ್ಟು ಅಭಿಮಾನಿಗಳಿದ್ದಾರೆ. ಜೊತೆಗೆ ಚಿತ್ರರಂಗದಲ್ಲಿ ವಿರೋಧಿಗಳೂ ಇದ್ದಾರೆ.

 ಸ್ಟಾರ್ ನಟಿ ನಯನತಾರಾ

ಕೆಲ ತಿಂಗಳ ಹಿಂದಷ್ಟೆ ನಯನತಾರಾ ಜೀವನದ ಬಗ್ಗೆ ಡಾಕ್ಯುಮೆಂಟರಿ ನೆಟ್​ಫ್ಲಿಕ್ಸ್​ನಲ್ಲಿ ಬಿಡುಗಡೆ ಆಗಿತ್ತು.

  ಡಾಕ್ಯುಮೆಂಟರಿ ರಿಲೀಸ್

ಆ ಡಾಕ್ಯುಮೆಂಟರಿಯಲ್ಲಿ ತಮ್ಮ ನಿರ್ಮಾಣದ ಸಿನಿಮಾದ ದೃಶ್ಯ ಬಳಸಿದ್ದಕ್ಕೆ ನಟ ಧನುಶ್ ದೂರು ದಾಖಲಿಸಿದ್ದರು.

 ದೂರು ದಾಖಲಿಸಿದ್ದ ನಟಿ

‘ನಾನು ರೌಡಿ ದಾ’ ಸಿನಿಮಾದ ಶೂಟಿಂಗ್ ದೃಶ್ಯ ಬಳಸಿದ್ದಕ್ಕೆ ಭಾರಿ ಮೊತ್ತದ ಪರಿಹಾರ ಕೊಡುವಂತೆ ಆಗ್ರಹಿಸಿದ್ದರು.

       ‘ನಾನು ರೌಡಿ ದಾ’

ಇದೀಗ ಮತ್ತೊಂದು ನೊಟೀಸ್ ಡಾಕ್ಯುಮೆಂಟರಿ ನಿರ್ಮಾಪಕರಿಗೆ ಬಂದಿದ್ದು, ಐದು ಕೋಟಿಗೆ ಬೇಡಿಕೆ ಇಟ್ಟಿದ್ದಾರೆ.

    ಮತ್ತೊಂದು ನೊಟೀಸ್

ನಯನತಾರಾ ನಟನೆಯ ‘ಚಂದ್ರಮುಖಿ’ ಸಿನಿಮಾದ ಕೆಲ ದೃಶ್ಯಗಳನ್ನು ಸಹ ಡಾಕ್ಯುಮೆಂಟರಿಯಲ್ಲಿ ಬಳಸಲಾಗಿತ್ತು.

    ‘ಚಂದ್ರಮುಖಿ’ ಸಿನಿಮಾ

‘ಚಂದ್ರಮುಖಿ’ ಸಿನಿಮಾದ ಹಕ್ಕು ಹೊಂದಿರುವ ಎಪಿ ಎಂಟರ್ಟೈನ್​​ಮೆಂಟ್​ನವರು ಇದೀಗ ಡಾಕ್ಯುಮೆಂಟರಿ ಮೇಕರ್ಸ್​ಗೆ ನೊಟೀಸ್ ಕಳಿಸಿದ್ದಾರೆ.

     ನೊಟೀಸ್ ಕಳಿಸಿದ್ದಾರೆ

ಅನುಮತಿ ಇಲ್ಲದೆ ತಮ್ಮ ಒಡೆತನದ ಸಿನಿಮಾದ ದೃಶ್ಯ ಬಳಸಿದ್ದಕ್ಕೆ ಐದು ಕೋಟಿ ಹಣ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.

ಅನುಮತಿ ಇಲ್ಲದೆ ಸಿನಿಮಾ