ರವಿಚಂದ್ರನ್, ಸುದೀಪ್ ನಾಯಕಿ ಈಗ ಬಿಗ್ ಬಾಸ್ ಸ್ಪರ್ಧಿ, ಯಾರೀಕೆ?

07 SEP 2025

By  Manjunatha

ತೆಲುಗು ಬಿಗ್​​ಬಾಸ್ ಸೀಸನ್ 9 ಇಂದಿನಿಂದ (ಸೆಪ್ಟೆಂಬರ್ 07) ಪ್ರಾರಂಭವಾಗಿದೆ. ನಾಗಾರ್ಜುನ ನಿರೂಪಣೆ ಮಾಡಲಿದ್ದಾರೆ.

ತೆಲುಗು ಬಿಗ್​​ಬಾಸ್ ಸೀಸನ್

ಹಲವಾರು ನಟ-ನಟಿಯರು, ಸಾಮಾನ್ಯರು, ವಿವಾದಾತ್ಮಕ ವ್ಯಕ್ತಿಗಳು ಸಹ ಬಿಗ್​​ಬಾಸ್​​ನಲ್ಲಿ ಭಾಗಿ ಆಗಿದ್ದಾರೆ.

 ಹಲವರು ಬಿಗ್​​ಬಾಸ್​​ನಲ್ಲಿ 

ಕನ್ನಡ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ನಟಿಸಿರುವ ಸ್ಟಾರ್ ನಟಿಯೊಬ್ಬರು ಬಿಗ್​​ಬಾಸ್ ತೆಲುಗು 9 ಗೆ ಎಂಟ್ರಿ ಕೊಟ್ಟಿದ್ದಾರೆ.

       ಸ್ಟಾರ್ ನಟಿ ಎಂಟ್ರಿ 

ರವಿಚಂದ್ರನ್, ಶಿವಣ್ಣ, ಸುದೀಪ್, ಜಗ್ಗೇಶ್ ಅವರೊಟ್ಟಿಗೆ ನಟಿಸಿರುವ ಫ್ಲೋರಾ ಸೈನಿ ಈಗ ಬಿಗ್​​ಬಾಸ್ ಸ್ಪರ್ಧಿ.

   ಕನ್ನಡದ ಸ್ಟಾರ್ ನಟರು

ಶಿವಣ್ಣ-ರವಿಚಂದ್ರನ್ ನಟಿಸಿರುವ ‘ಕೋದಂಡರಾಮ’, ಸುದೀಪ್ ನಟನೆಯ ‘ನಮ್ಮಣ್ಣ’ ಸಿನಿಮಾಗಳಲ್ಲಿ ಇವರು ನಟಿಸಿದ್ದಾರೆ.

‘ಕೋದಂಡರಾಮ’,ನಮ್ಮಣ್ಣ

ಇವೆರಡು ಮಾತ್ರವೇ ಅಲ್ಲದೆ ‘ವಾರೆವಾ’, ‘ಗಿರಿ’, ‘ಧಿಮಾಕು’, ಸಿಐಡಿ ಈಶ ಇನ್ನು ಕೆಲ ಕನ್ನಡ ಸಿನಿಮಾಗಳಲ್ಲಿ ಇವರು ನಟಿಸಿದ್ದಾರೆ.

   ಹಲವು ಕನ್ನಡ ಸಿನಿಮಾ

ಫ್ಲೋರಾ ಸೈನಿಗೆ ಈಗ ಸುಮಾರು 46 ವರ್ಷ ವಯಸ್ಸು. ಇತ್ತೀಚೆಗೆ ಸಿನಿಮಾ ಅವಕಾಶಗಳು ಅವರಿಗೆ ಕಡಿಮೆ ಆಗಿವೆ.

      46 ವರ್ಷ ವಯಸ್ಸು

ಫ್ಲೋರಾ ಸೈನಿ ತೆಲುಗು ಚಿತ್ರರಂಗದ ಬಲು ಬೇಡಿಕೆಯ ನಟಿಯಾಗಿದ್ದರು. ಬಾಲಕೃಷ್ಣ, ವೆಂಕಟೇಶ್ ಇನ್ನೂ ಕೆಲವರೊಡನೆ ನಟಿಸಿದ್ದಾರೆ.

ಬೇಡಿಕೆಯ ನಟಿಯಾಗಿದ್ದರು