ಹದಿಮೂರು ವರ್ಷದ ಬಳಿಕ ಮತ್ತೆ ಟಾಲಿವುಡ್​ಗೆ ಬರುತ್ತಿದ್ದಾರೆ ಸ್ಟಾರ್ ನಟಿ

13 May 2025

By  Manjunatha

ಮುಂಬೈ ಮೂಲದ ಜೆನಿಲಿಯಾ ಡಿ ಸೋಜಾ, ದಕ್ಷಿಣ ಭಾರತದಲ್ಲಿ ಸ್ಟಾರ್ ನಟಿಯಾಗಿ ಗುರುತಿಸಿಕೊಂಡಿದ್ದರು.

   ಜೆನಿಲಿಯಾ ಡಿ ಸೋಜಾ

ಅದರಲ್ಲೂ ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಂತೂ ಜೆನಿಲಿಯಾ ಡಿಸೋಜಾ ನಂಬರ್ 1 ನಟಿಯಾಗಿದ್ದರು.

ನಂಬರ್ 1 ನಟಿಯಾಗಿದ್ದರು

ತೆಲುಗು, ತಮಿಳಿನ ಎಲ್ಲ ಸ್ಟಾರ್ ನಟರೊಟ್ಟಿಗೂ ನಟಿಸಿದ್ದಾರೆ ಜೆನಿಲಿಯಾ ಡಿಸೋಜಾ. ತೆಲುಗಿನ ಟಾಪ್ ನಟಿಯಾಗಿದ್ದರು.

      ತೆಲುಗಿನ ಟಾಪ್ ನಟಿ

ತೆಲುಗು ಪ್ರೇಕ್ಷಕರ ಪಾಲಿಗಂತೂ ಜೆನಿಲಿಯಾ ಡಿಸೋಜಾ ಅವರದ್ದೇ ರಾಜ್ಯದ ನಟಿಯಾಗಿಬಿಟ್ಟಿದ್ದರು.

    ತೆಲುಗರ ಮೆಚ್ಚಿನ ನಟಿ

ಆದರೆ 2012ರ ‘ನಾ ಇಷ್ಟಂ’ ಸಿನಿಮಾ ಬಳಿಕ ಯಾವುದೇ ತೆಲುಗು ಸಿನಿಮಾನಲ್ಲಿ ಜೆನಿಲಿಯಾ ಡಿಸೋಜಾ ನಟಿಸಿಲ್ಲ.

      2012ರ ‘ನಾ ಇಷ್ಟಂ’

ಇದೀಗ ಬರೋಬ್ಬರಿ 13 ವರ್ಷಗಳ ಬಳಿಕ ತಮ್ಮ ಮೆಚ್ಚಿನ ತೆಲುಗು ಚಿತ್ರರಂಗಕ್ಕೆ ವಾಪಸ್ಸಾಗುತ್ತಿದ್ದಾರೆ ಜೆನಿಲಿಯಾ ಡಿಸೋಜಾ.

       13 ವರ್ಷಗಳ ಬಳಿಕ

ಸ್ಟಾರ್ ನಟರೊಬ್ಬರ ಮಹತ್ವದ ಸಿನಿಮಾನಲ್ಲಿ ಜೆನಿಲಿಯಾ ಡಿಸೋಜಾ ನಾಯಕಿಯ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ.

   ನಾಯಕಿಯ ಪಾತ್ರದಲ್ಲಿ

ಜೆನಿಲಿಯಾ ಡಿಸೋಜಾ, ತೆಲುಗಿನಲ್ಲಿ ಮಹಿಳಾ ಪ್ರಧಾನ ಸಿನಿಮಾ ಮಾಡಲು ಸಹ ಉತ್ಸಾಹ ತೋರಿದ್ದಾರಂತೆ.

 ಮಹಿಳಾ ಪ್ರಧಾನ ಸಿನಿಮಾ