ದಕ್ಷಿಣ ಚಿತ್ರರಂಗದ ಬಗ್ಗೆ ವ್ಯಂಗ್ಯದ ಪ್ರಶ್ನೆ, ತಿರುಗೇಟು ನೀಡಿದ ಜೆನಿಲಿಯಾ

19 June 2025

By  Manjunatha

ಜೆನಿಲಿಯಾ ಡಿಸೋಜಾ ಭಾರತದ ಖ್ಯಾತ ನಟಿ, ಇತ್ತೀಚೆಗೆ ಸಿನಿಮಾಗಳಲ್ಲಿ ನಟಿಸುವುದು ಕಡಿಮೆ ಮಾಡಿದ್ದಾರೆ.

    ಜೆನಿಲಿಯಾ ಡಿಸೋಜಾ

ಇದೀಗ ಆಮಿರ್ ಖಾನ್ ನಟನೆಯ ‘ಸಿತಾರೆ ಜಮೀನ್ ಪರ್’ ಸಿನಿಮಾನಲ್ಲಿ ನಟಿಸಿದ್ದಾರೆ. ಪ್ರಚಾರದಲ್ಲೂ ಭಾಗಿ ಆಗಿದ್ದಾರೆ.

     ಸಿತಾರೆ ಜಮೀನ್ ಪರ್

‘ಸಿತಾರೆ ಜಮೀನ್ ಪರ್’ ಸಿನಿಮಾದ ಪ್ರಚಾರದ ವೇಳೆ ಸಂದರ್ಶಕನೊಬ್ಬ ಜೆನಿಲಿಯಾ ಬಳಿ ದಕ್ಷಿಣ ಭಾರತ ಚಿತ್ರರಂಗದ ಬಗ್ಗೆ ವ್ಯಂಗ್ಯವಾದ ಪ್ರಶ್ನೆ ಕೇಳಿದ್ದಾನೆ.

  ದಕ್ಷಿಣ ಭಾರತ ಚಿತ್ರರಂಗ

ನಿಮಗೆ ದಕ್ಷಿಣ ಭಾರತ ಚಿತ್ರರಂಗದಲ್ಲಿ ಗಟ್ಟಿಯಾದ ಪಾತ್ರ ಸಿಕ್ಕಿಲ್ಲ ಅಲ್ಲವೆ ಆ ಬಗ್ಗೆ ಬೇಸರ ಇದೆಯೇ ಎಂಬುದು ಸಂದರ್ಶಕನ ಪ್ರಶ್ನೆಯಾಗಿತ್ತು.

 ಗಟ್ಟಿಯಾದ ಪಾತ್ರ ಸಿಕ್ಕಿಲ್ಲ

ಇದಕ್ಕೆ ಜೆನಿಲಿಯಾ ಸರಿಯಾದ ತಿರುಗೇಟು ನೀಡಿದ್ದಾರೆ. ನನಗೆ ಅತಿ ಹೆಚ್ಚು ಗಟ್ಟಿಯಾದ ಮತ್ತು ಒಳ್ಳೆ ಪಾತ್ರ ಸಿಕ್ಕಿರುವುದು ದಕ್ಷಿಣ ಭಾರತದಲ್ಲಿಯೇ ಎಂದಿದ್ದಾರೆ.

    ತಿರುಗೇಟು ನೀಡಿದ್ದಾರೆ

ಹಾಸಿನಿ, ಹರಿಣಿ, ಆಯೆಷಾ ಅಂಥಹಾ ಪಾತ್ರಗಳು ನನಗೆ ಬೇರೆಲ್ಲೂ ಸಿಕ್ಕಿಲ್ಲ ಎಂದು ದಕ್ಷಿಣದ ತಮ್ಮ ಪಾತ್ರಗಳ ಹೆಸರು ಹೇಳಿದ್ದಾರೆ.

 ಹಾಸಿನಿ, ಹರಿಣಿ, ಆಯೆಷಾ

ದಕ್ಷಿಣ ಭಾರತ ಚಿತ್ರರಂಗದಲ್ಲಿ ನಟಿಸಲು ನಾನು ಅದೃಷ್ಟ ಮಾಡಿದ್ದೆ, ಅದು ನನಗೆ ಕಲಿಕೆಯ ಒಳ್ಳೆ ವೇದಿಕೆ ಆಗಿತ್ತು ಎಂದಿದ್ದಾರೆ.

 ನಾನು ಅದೃಷ್ಟ ಮಾಡಿದ್ದೆ

ನಟ-ನಟಿಯರು ತಾವು ಮಾಡುವ ಕೆಲಸದ ಸುಖಕ್ಕಾಗಿ ಕೆಲಸ ಮಾಡಬೇಕು, ಅದರ ವಿನಃ ತಾವು ಮಿಂಚಲಿ ಎಂದು ಅಲ್ಲ ಎಂದಿದ್ದಾರೆ.

 ಕೆಲಸದ ಸುಖಕ್ಕಾಗಿ ಕೆಲಸ