ತೂಕ ಕೇಳಿದ ವ್ಯಕ್ತಿಗೆ ಚಳಿ ಬಿಡಿಸಿದ ನಟಿ ಗೌರಿ ಕಿಶನ್: ಯಾರೀಕೆ

07 NOV 2025

By  Manjunatha

ನಟಿಯರಿಗೆ ಸಾಮಾಜಿಕ ಜಾಲತಾಣದಲ್ಲಿ ಅಸಭ್ಯ ಕೋರಿಕೆ, ಬೇಡಿಕೆ, ಪ್ರಶ್ನೆಗಳು ಎದುರಾಗುತ್ತಲೇ ಇರುತ್ತವೆ.

    ಸಾಮಾಜಿಕ ಜಾಲತಾಣ

ಸಾಮಾಜಿಕ ಜಾಲತಾಣದಲ್ಲಿ ಮಾತ್ರವಲ್ಲದೆ, ಸಮಾಜದಲ್ಲಿಯೂ ಕೆಲವು ಬಾರಿ ಇಂಥಹಾ ಮುಜುಗರದ ಪ್ರಶ್ನೆಗಳನ್ನು ನಟಿಯರು ಎದುರಿಸುತ್ತಾರೆ.

    ಮುಜುಗರದ ಪ್ರಶ್ನೆಗಳು

ವಿಶೇಷವಾಗಿ ಇತ್ತೀಚೆಗೆ ಕೆಲ ಯೂಟ್ಯೂಬರ್​​ಗಳು, ಪತ್ರಕರ್ತರು ಸಹ ಈ ರೀತಿ ಮುಜುಗರ ಉಂಟಾಗುವ ಪ್ರಶ್ನೆಗಳನ್ನು ಕೇಳುತ್ತಾರೆ.

   ಪ್ರಶ್ನೆಗಳನ್ನು ಕೇಳುತ್ತಾರೆ

ಇತ್ತೀಚೆಗೆ ನಟಿಯೊಬ್ಬರನ್ನು ಸುದ್ದಿಗೋಷ್ಠಿಯಲ್ಲಿ ಹೀಗೆಯೇ ಮುಜುಗರ ಉಂಟಾಗುವಂತ ಪ್ರಶ್ನೆ ಕೇಳಲಾಗಿದೆ.

   ಮುಜುಗರದ ಪ್ರಶ್ನೆಗಳು

ನಟಿ ಗೌರಿ ಕಿಶನ್ ಅವರನ್ನು ಸುದ್ದಿಗೋಷ್ಠಿಯಲ್ಲಿ ನಿಮ್ಮ ತೂಕ ಎಷ್ಟು ಎಂದು ವ್ಯಕ್ತಿಯೊಬ್ಬ ಕೇಳಿದ್ದಾನೆ.

         ನಟಿ ಗೌರಿ ಕಿಶನ್

ಇದನ್ನು ತೀವ್ರವಾಗಿ ವಿರೋಧಿಸಿರುವ ಗೌರಿ ಕಿಶನ್, ‘ನನ್ನ ತೂಕ ಕಟ್ಟಿಕೊಂಡು ನಿಮಗೇನಾಗಬೇಕು’ ಎಂದು ಮರು ಪ್ರಶ್ನೆ ಮಾಡಿದ್ದಾರೆ.

      ತೂಕದ ಬಗ್ಗೆ ಪ್ರಶ್ನೆ

ಬಳಿಕವೂ ಆ ವ್ಯಕ್ತಿ ಮಾತನಾಡಿದಾಗ, ಸಿನಿಮಾ ಬಗ್ಗೆ ಕೇಳಿ, ನಿಮ್ಮದು ವೃತ್ತಿಪರತೆ ಅಲ್ಲ, ಸಿನಿಮಾ ಬಗ್ಗೆ ಪ್ರಶ್ನೆ ಕೇಳಿ ಉತ್ತರಿಸುವೆ ಎಂದಿದ್ದಾರೆ.

       ಸಿನಿಮಾ ಬಗ್ಗೆ ಕೇಳಿ

ಗೌರಿ ಕಿಶನ್ ತೋರಿಸಿರುವ ಧೈರ್ಯದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಮೆಚ್ಚುಗೆ ವ್ಯಕ್ತವಾಗಿದೆ.

      ತೀವ್ರ ಮೆಚ್ಚುಗೆ ವ್ಯಕ್ತ