ಹಿಂಸೆ, ದೌರ್ಜನ್ಯ, ಮುದ್ದು ಮುಖದ ನಟಿಯ ಮೇಲೆ ಗಂಭೀರ ಆರೋಪ

13 SEP 2025

By  Manjunatha

ನಟಿ ಹನ್ಸಿಕಾ ಮೊಟ್ವಾನಿ ಪ್ಯಾನ್ ಇಂಡಿಯಾ ನಟಿ. ದಶಕದ ಹಿಂದೆ ದಕ್ಷಿಣದ ಸ್ಟಾರ್ ನಟಿಯೂ ಆಗಿದ್ದರು.

  ನಟಿ ಹನ್ಸಿಕಾ ಮೊಟ್ವಾನಿ

ಕನ್ನಡದ ‘ಬಿಂದಾಸ್’ ಸೇರಿದಂತೆ ತೆಲುಗಿನಲ್ಲಿ ಸ್ಟಾರ್ ನಟರುಗಳೊಟ್ಟಿಗೆ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ.

 ಕನ್ನಡದ ‘ಬಿಂದಾಸ್’ ಚಿತ್ರ

ಮುದ್ದು ಮುಖದ ಹನ್ಸಿಕಾ ವಿರುದ್ಧ ಕೆಲ ಗಂಭೀರ ಆರೋಪಗಳು ಕೇಳಿ ಬಂದಿದ್ದು, ಸಹೋದರನ ಪತ್ನಿ ಕೇಸು ದಾಖಲಿಸಿದ್ದಾರೆ.

ಮುದ್ದು ಮುಖದ ಹನ್ಸಿಕಾ

ಹನ್ಸಿಕಾ ಮೊಟ್ವಾನಿ ಅವರ ಸಹೋದರನ ಪತ್ನಿ, ನಟಿ ನ್ಯಾನ್ಸಿ ಜೇಮ್ಸ್ ಹನ್ಸಿಕಾ ವಿರುದ್ಧ ದೌರ್ಜನ್ಯದ ಕೇಸು ದಾಖಲಿಸಿದ್ದಾರೆ.

ನಟಿ ನ್ಯಾನ್ಸಿ ಜೇಮ್ಸ್ ದೂರು

ಹನ್ಸಿಕಾ ಮೊಟ್ವಾನಿ, ಅವರ ತಾಯಿ ಮತ್ತು ಸಹೋದರನ ವಿರುದ್ಧ ದೌರ್ಜನ್ಯ, ಹಿಂಸೆ, ವರದಕ್ಷಿಣೆ ಕಿರುಕುಳ ಇನ್ನಿತರೆ ದೂರುಗಳನ್ನು ನ್ಯಾನ್ಸಿ ದಾಖಲಿಸಿದ್ದಾರೆ.

ದೌರ್ಜನ್ಯ, ಹಿಂಸೆ ಆರೋಪ

ತಮ್ಮ ವಿರುದ್ಧದ ಎಫ್​​ಐಆರ್ ರದ್ದು ಮಾಡುವಂತೆ ಹನ್ಸಿಕಾ ನ್ಯಾಯಾಲಯದ ಮೆಟ್ಟಿಲು ಏರಿದ್ದರು ಆದರೆ ಅದರಿಂದ ಪ್ರಯೋಜನವಾಗಿಲ್ಲ.

ಎಫ್​​ಐಆರ್ ರದ್ದಿಗೆ ಮನವಿ

ನ್ಯಾಯಾಲಯದ ಆದೇಶದಂತೆ ಈಗ ನಟಿ ಹನ್ಸಿಕಾ ಮೊಟ್ವಾನಿ ವರದಕ್ಷಿಣೆ ಪ್ರಕರಣದಲ್ಲಿ ವಿಚಾರಣೆ ಎದುರಿಸಬೇಕಿದೆ.

  ನ್ಯಾಯಾಲಯದ ಆದೇಶ

ಹನ್ಸಿಕಾ ಮೊಟ್ವಾನಿ ತಮ್ಮ ಮೇಲಿನ ಆರೋಪಗಳನ್ನು ತಳ್ಳಿ ಹಾಕಿದ್ದು, ನ್ಯಾನ್ಸಿಯ ಮದುವೆ ಮಾಡಿಸಿದ್ದೇ ನಾನು ಎಂದಿದ್ದಾರೆ.

       ನ್ಯಾನ್ಸಿಯ ಮದುವೆ