ಹರೀಶ್ ರಾಯ್ ನಿಧನ, ಅವರಿಗಿದ್ದ ಆರೋಗ್ಯ ಸಮಸ್ಯೆ ಏನು? ಚಿಕಿತ್ಸೆ ವೆಚ್ಚ ಎಷ್ಟಾಗಿತ್ತು?

06 NOV 2025

By  Manjunatha

ಕನ್ನಡ ಚಿತ್ರರಂಗದ ಖ್ಯಾತ ಖಳನಟ ಹರೀಶ್ ರಾಯ್ ಅವರು ನವೆಂಬರ್ 06ರಂದು ನಿಧನ ಹೊಂದಿದ್ದಾರೆ.

    ಹರೀಶ್ ರಾಯ್ ನಿಧನ

ಪತ್ನಿ, ಇಬ್ಬರು ಮಕ್ಕಳನ್ನು ಅಗಲಿರುವ ಹರೀಶ್ ರಾಯ್ ಅವರಿಗೆ 55 ವರ್ಷ ವಯಸ್ಸಾಗಿತ್ತು.

       55 ವರ್ಷ ವಯಸ್ಸು

ಹರೀಶ್ ರಾಯ್ ಅವರು ಕಳೆದ ಕೆಲ ವರ್ಷಗಳಿಂದಲೂ ಅನಾರೋಗ್ಯದಿಂದ ಬಳಲುತ್ತಿದ್ದರು.

      ತೀವ್ರ  ಅನಾರೋಗ್ಯ

ಹರೀಶ್ ರಾಯ್ ಅವರೇ ಹೇಳಿಕೊಂಡಿದ್ದಂತೆ ಅವರಿಗೆ ಥೈರಾಯ್ಡ್ ಕ್ಯಾನ್ಸರ್ ಆಗಿತ್ತು.

      ಥೈರಾಯ್ಡ್ ಕ್ಯಾನ್ಸರ್

ಕ್ಯಾನ್ಸರ್ ಹೊಟ್ಟೆಯ ಭಾಗಗಳಿಗೆ ಪಸರಿಸಿ, ಹೊಟ್ಟೆಯಲ್ಲಿ ನೀರು ತುಂಬಿಕೊಂಡಿ ಊದಿಕೊಂಡಿತ್ತು. ದೇಹ ಕೃಷವಾಗಿತ್ತು.

      ಹೊಟ್ಟೆಗೆ ಪಸರಿಸಿತ್ತು

ಕ್ಯಾನ್ಸರ್ ಚಿಕಿತ್ಸೆಗೆ ಬರೋಬ್ಬರಿ 70 ಲಕ್ಷ ರೂಪಾಯಿ ಹಣದ ಅವಶ್ಯಕತೆ ಇದೆ ಎಂದು ಹರೀಶ್ ರಾಯ್ ಹೇಳಿದ್ದರು.

     ಚಿಕಿತ್ಸೆಗೆ ಎಷ್ಟು ಹಣ?

ಚಿಕಿತ್ಸೆಗೆ ನೀಡಲಾಗುವ ಪ್ರತಿ ಇಂಜೆಕ್ಷನ್​​ಗೆ 3.50 ಲಕ್ಷ ರೂಪಾಯಿ ಹಣವನ್ನು ಹರೀಶ್ ರಾಯ್ ವ್ಯಯಿಸಬೇಕಿತ್ತು.

    ಇಂಜೆಕ್ಷನ್​​ಗೆ 3.50 ಲಕ್ಷ

ಹರೀಶ್ ರಾಯ್ ಅವರು 3.50 ಲಕ್ಷ ಮೌಲ್ಯದ 17 ಇಂಜೆಕ್ಷನ್​​ಗಳ ಅವಶ್ಯಕತೆ ಇತ್ತೆಂದು ಅವರೇ ಹೇಳಿದ್ದರು.

        17 ಇಂಜೆಕ್ಷನ್​​ಗಳು  

ಹಲವು ದೊಡ್ಡ ನಟರು ಸೇರಿದಂತೆ ಕೆಲ ನಿರ್ಮಾಪಕರುಗಳು ಸಹ ಹರೀಶ್ ರಾಯ್ ಅವರಿಗೆ ಸಹಾಯ ಮಾಡಿದ್ದರು. ಆದರೆ ಅವರು ಉಳಿಯಲಿಲ್ಲ.

    ಸಹಾಯ ಮಾಡಿದ್ದರು