ತಮನ್ನಾ ಭಾಟಿಯಾ ಫಿಟ್​​ನೆಸ್ ಗುಟ್ಟು ಅವರ ಆಹಾರದಲ್ಲಿದೆ, ಇಲ್ಲಿದೆ ನಟಿಯ ಡಯಟ್

22 NOV 2025

By  Manjunatha

ತಮನ್ನಾ ಭಾಟಿಯಾ ಕೆಲ ದಶಕಗಳಿಂದಲೂ ಚಿತ್ರರಂಗದಲ್ಲಿ ನಾಯಕಿಯಾಗಿ ಮಿಂಚುತ್ತಿದ್ದಾರೆ.

 ನಟಿ ತಮನ್ನಾ ಭಾಟಿಯಾ

ತಮನ್ನಾ ಭಾಟಿಯಾ ವಯಸ್ಸು 35 ದಾಟಿದ್ದರೂ ಈಗಲೂ ಸಹ 18ರ ಯುವತಿಯರಂತೆ ನುಣುಪಾದ ತ್ವಚೆ ಹೊಂದಿದ್ದಾರೆ.

    ನುಣುಪಾದ ತ್ವಚೆ ಇದೆ

ಜೊತೆಗೆ ಫಿಟ್​​ ಆಗಿರುವ ದೇಹ ಹೊಂದಿದ್ದಾರೆ. ಈಗಲೂ ನಾಯಕಿಯಾಗಿ ನಟಿಸುತ್ತಾರೆ. ಇದಕ್ಕೆ ಅವರ ಡಯಟ್ ಕಾರಣ.

ನಾಯಕಿಯಾಗಿ ನಟಿಸುತ್ತಾರೆ

ತಮನ್ನಾ ಭಾಟಿಯಾ ವ್ಯಾಯಾಮದ ಜೊತೆಗೆ ಡಯಟ್ ಬಗ್ಗೆ ಅತೀವ ಕಾಳಜಿ ವಹಿಸುತ್ತಾರೆ. ಹಾಗಾಗಿ ಅವರು ಫಿಟ್ ಆಗಿದ್ದಾರೆ.

   ವ್ಯಾಯಾಮ- ಡಯಟ್

ತಮನ್ನಾ ಭಾಟಿಯಾ ತಮ್ಮ ಆಹಾರದಲ್ಲಿ ಹೆಚ್ಚಿನ ಪ್ರೋಟೀನ್ ಇರುವಂತೆ ನೋಡಿಕೊಳ್ಳುತ್ತಾರೆ. ಜೊತೆಗೆ ಕರಿದಿದ್ದನ್ನು ಸೇವಿಸುವುದಿಲ್ಲ.

ಪ್ರೋಟೀನ್ ಯುಕ್ತ ಆಹಾರ

ಬೆಳಿಗ್ಗೆ ಬೆರ್ರಿ, ಬಾದಾಮಿ ಹಾಲು, ಕೆಲವು ನಟ್ಸ್​​ಗಳಿಂದ ಮಾಡಿದ ಸ್ಮೂತಿಯನ್ನು ತಮನ್ನಾ ಸೇವಿಸುತ್ತಾರೆ. ಬಳಿಕ ಮೊಟ್ಟೆ ತಿನ್ನುತ್ತಾರೆ.

ಸ್ಮೂತಿಯನ್ನು ಸೇವಿಸುತ್ತಾರೆ

ಮಧ್ಯಾಹ್ನ ಚಪಾತಿ, ತುಸುವೇ ಅನ್ನ, ಹೆಚ್ಚಾಗಿ ತರಕಾರಿಗಳಿರುವ ಪಲ್ಯ ಸೇವಿಸುತ್ತಾರೆ. ನೀರು ಹೆಚ್ಚು ಕುಡಿಯುತ್ತಾರೆ.

 ಮಧ್ಯಾಹ್ನದ ಊಟ ಏನು?

ರಾತ್ರಿ ಸಹ ಮೊಟ್ಟೆ, ಅನ್ನ, ತುಸುವೇ ರೋಟಿ, ಬೇಯಿಸಿದ ತರಕಾರಿಗಳನ್ನು ತಮನ್ನಾ ಭಾಟಿಯಾ ಸೇವಿಸುತ್ತಾರೆ.

       ರಾತ್ರಿ ಊಟ ಏನು?