ನಟಿ ರುಕ್ಮಿಣಿ ವಸಂತ್ ಕೈಯಲ್ಲಿರುವ ಸಿನಿಮಾಗಳೆಷ್ಟು?

25 SEP 2026

By  Manjunatha

ರುಕ್ಮಿಣಿ ವಸಂತ್ ಅಪ್ಪಟ ಕನ್ನಡದ ನಟಿ, ಈಗ ಅವರು ಪರ ಭಾಷೆ ಸಿನಿಮಾಗಳಲ್ಲಿ ಮಿಂಚುತ್ತಿದ್ದಾರೆ.

     ನಟಿ ರುಕ್ಮಿಣಿ ವಸಂತ್

‘ಸಪ್ತ ಸಾಗರದಾಚೆ ಎಲ್ಲೊ’, ‘ಕಾಂತಾರ ಚಾಪ್ಟರ್ 1’ ಸಿನಿಮಾಗಳ ಬಳಿಕ ಪ್ಯಾನ್ ಇಂಡಿಯಾ ನಟಿಯಾಗಿದ್ದಾರೆ ರುಕ್ಮಿಣಿ ವಸಂತ್.

   ಪ್ಯಾನ್ ಇಂಡಿಯಾ ನಟಿ

ಇದೀಗ ರುಕ್ಮಿಣಿ ವಸಂತ್ ಅವರ ಕೈಯಲ್ಲಿ ಹಲವು ಸಿನಿಮಾಗಳಿವೆ. ಕನ್ನಡ ಸೇರಿದಂತೆ ಬೇರೆ ಭಾಷೆ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

     ಹಲವು ಸಿನಿಮಾಗಳಿವೆ

ರುಕ್ಮಿಣಿ ವಸಂತ್, ಜೂ ಎನ್​​ಟಿಆರ್ ಜೊತೆಗೆ ‘ಡ್ರ್ಯಾಗನ್’ ಸಿನಿಮಾನಲ್ಲಿ ನಾಯಕಿಯಾಗಿ ನಟನೆ ಮಾಡುತ್ತಿದ್ದಾರೆ.

  ‘ಡ್ರ್ಯಾಗನ್’ ಸಿನಿಮಾನಲ್ಲಿ

ಮಲಯಾಳಂ ಚಿತ್ರರಂಗಕ್ಕೆ ರುಕ್ಮಿಣಿ ವಸಂತ್ ಎಂಟ್ರಿ ಕೊಟ್ಟಿದ್ದು, ನಿವಿನ್ ಪೌಲಿ ಹೊಸ ಸಿನಿಮಾನಲ್ಲೇ ಅವರೇ ನಾಯಕಿ.

   ಮಲಯಾಳಂ ಚಿತ್ರರಂಗ

ರುಕ್ಮಿಣಿ ವಸಂತ್ ಅವರು ತಮಿಳಿನ ಎರಡು ಸಿನಿಮಾಗಳಲ್ಲಿ ನಟನೆ ಮಾಡುತ್ತಿದ್ದಾರೆ ಎಂಬ ಸುದ್ದಿಯೂ ಹರಿದಾಡುತ್ತಿದೆ.

 ತಮಿಳಿನ ಎರಡು ಸಿನಿಮಾ

ಇವುಗಳ ಜೊತೆಗೆ ಕನ್ನಡದಲ್ಲಿ ಮಾಲಾಶ್ರೀ ಜೊತೆಗೆ ‘ಮಂಗಳ ಗೌರಿ’ ಹೆಸರಿನ ಸಿನಿಮಾನಲ್ಲಿ ನಟನೆ ಮಾಡುತ್ತಿದ್ದಾರೆ.

   ‘ಮಂಗಳ ಗೌರಿ’ ಸಿನಿಮಾ

ಕನ್ನಡದ ಇನ್ನೊಂದು ಸಿನಿಮಾನಲ್ಲಿ ಸಹ ರುಕ್ಮಿಣಿ ವಸಂತ್ ನಟನೆ ಮಾಡುತ್ತಿದ್ದಾರೆ ಈ ಬಗ್ಗೆ ಇನನ್ನಷ್ಟೆ ಮಾಹಿತಿ ಹೊರಬೀಳಬೇಕಿದೆ.

 ಇನ್ನೊಂದು ಸಿನಿಮಾನಲ್ಲಿ