ಶೋಭಿತಾ ಹಾಗೂ ನಾಗ ಚೈತನ್ಯ ಪರಿಚಯ ಆಗಿದ್ದು ಹೇಗೆ?

09 OCT 2025

By  Manjunatha

ಶೋಭಿತಾ ಧುಲಿಪಾಲ ಮತ್ತು ನಾಗ ಚೈತನ್ಯ ಮದುವೆಯಾಗಿ ವರ್ಷವಾಗುತ್ತಾ ಬಂತು. ನಾಗ ಚೈತನ್ಯಗೆ ಇದು ಎರಡನೇ ಮದುವೆ.

  ಶೋಭಿತಾ ನಾಗ ಚೈತನ್ಯ

ನಾಗ ಚೈತನ್ಯ ಮತ್ತು ಶೋಭಿತಾ ಅವರುಗಳು ಬಲು ಅನ್ಯೋನ್ಯವಾಗಿದ್ದಾರೆ. ಇಬ್ಬರೂ ಪ್ರವಾಸಗಳಿಗೆ ಹೋಗುತ್ತಿರುತ್ತಾರೆ.

     ಅನ್ಯೋನ್ಯವಾಗಿದ್ದಾರೆ

ಇತ್ತೀಚೆಗೆ ಪತ್ನಿ ಬಗ್ಗೆ ಮಾತನಾಡಿರುವ ನಾಗ ಚೈತನ್ಯ, ಜೀವನದಲ್ಲಿ ನಾನು ಪತ್ನಿ ಶೋಭಿತಾರನ್ನು ಬಿಟ್ಟು ಇರಲಾರೆ ಎಂದಿದ್ದಾರೆ.

       ಪತ್ನಿ ಬಗ್ಗೆ ಮಾತು

ಶೋಭಿತಾ ಧುಲಿಪಾಲರ ಮೊದಲಿಗೆ ಪರಿಚಯ ಆಗಿದ್ದು ಹೇಗೆ ಎಂಬುದನ್ನು ಸಹ ನಾಗ ಚೈತನ್ಯ ವಿವರಿಸಿದ್ದಾರೆ.

   ಪರಿಚಯ ಆಗಿದ್ದು ಹೇಗೆ

ನಾಗ ಚೈತನ್ಯ ‘ಶೋಯು’ ಹೆಸರಿನ ಕ್ಲೌಡ್ ಕಿಚನ್ ಒಂದನ್ನು ಪ್ರಾರಂಭ ಮಾಡಿ, ಅದರ ಪೋಸ್ಟ್ ಹಂಚಿಕೊಂಡಿದ್ದರು.

ಕ್ಲೌಡ್ ಕಿಚನ್ ಬಗ್ಗೆ ಪೋಸ್ಟ್

ನಾಗ ಚೈತನ್ಯ ಹಂಚಿಕೊಂಡಿದ್ದ ‘ಶೋಯು’ ಕ್ಲೌಡ್ ಕಿಚನ್​​ ಪೋಸ್ಟ್​​ಗೆ ಇನ್​ಸ್ಟಾಗ್ರಾಂನಲ್ಲಿ ಪ್ರತಿಕ್ರಿಯೆ ನೀಡಿದ್ದರಂತೆ ಶೋಭಿತಾ.

 ಪ್ರತಿಕ್ರಿಯಿಸಿದ್ದ ಶೋಭಿತಾ

ಆ ಒಂದು ಮೆಸೇಜ್ ಇಂದಾಗಿ ಈ ಇಬ್ಬರ ನಡುವೆ ಪರಿಚಯ ಮೂಡಿದೆ, ಪರಿಚಯ ಪ್ರೀತಿಯಾಗಿ, ಈಗ ಮದುವೆ ಆಗಿದ್ದಾರೆ.

 ಒಂದು ಮೆಸೇಜ್ ಇಂದಾಗಿ

ಶೋಭಿತಾ ಧುಲಿಪಾಲ ಜನಪ್ರಿಯ ನಟಿ ಹಾಗೂ ಮಾಡೆಲ್ ಸಹ ಆಗಿದ್ದಾರೆ. ಅವರು ತೆಲುಗು ಮೂಲದವರೇ ಆಗಿದ್ದಾರೆ.

  ಮಾಡೆಲ್ ಸಹ ಆಗಿದ್ದಾರೆ