ಯಶ್​​ ಶ್ರಮ, ಪ್ರತಿಭೆಯನ್ನು ಕೊಂಡಾಡಿದ ಬಾಲಿವುಡ್ ನಟಿ

28 June 2026

By  Manjunatha

ಯಶ್ ಈಗ ಪ್ಯಾನ್ ಇಂಡಿಯಾ ಸ್ಟಾರ್. ಅವರಿಗೆ ದೇಶದಾದ್ಯಂತ ಅಭಿಮಾನಿಗಳು ಇದ್ದಾರೆ.

 ಪ್ಯಾನ್ ಇಂಡಿಯಾ ಸ್ಟಾರ್

ಯಶ್ ಅವರಿಗೆ ಸಿನಿಮಾ ಪ್ರೇಮಿಗಳು, ಸಿನಿಮಾ ವೀಕ್ಷಕರು ಮಾತ್ರವೇ ಅಲ್ಲ, ಸಿನಿಮಾ ಸೆಲೆಬ್ರಿಟಿಗಳು ಸಹ ಅಭಿಮಾನಿಗಳೇ.

ಸಿನಿಮಾ ಸೆಲೆಬ್ರಿಟಿಗಳು ಸಹ

ಯಶ್ ಅವರ ‘ಟಾಕ್ಸಿಕ್’ ಸಿನಿಮಾದ ಐವರು ನಾಯಕಿಯರಲ್ಲಿ ಬಾಲಿವುಡ್ ನಟಿ ಹುಮಾ ಖುರೇಷಿ ಸಹ ಒಬ್ಬರು.

  ಐವರು ನಾಯಕಿಯರಲ್ಲಿ

ಇದೀಗ ಹುಮಾ ಖುರೇಷಿ, ಯಶ್ ಬಗ್ಗೆ ಮಾತನಾಡಿದ್ದು, ತಾವು ಯಶ್ ಅವರ ಫ್ಯಾನ್ ಆಗಿರುವುದಾಗಿ ಹೇಳಿದ್ದಾರೆ.

ಯಶ್ ಬಗ್ಗೆ ಮಾತನಾಡಿದ್ದು

ನನಗೆ ಮೊದಲು ಯಶ್ ಎಂದರೆ ಅವರು ಒಬ್ಬ ದಕ್ಷಿಣ ಭಾರತದ ಜನಪ್ರಿಯ ನಟ ಎಂಬ ಅಭಿಪ್ರಾಯ ಮಾತ್ರ ಇತ್ತು ಎಂದಿದ್ದಾರೆ.

  ಭಾರತದ ಜನಪ್ರಿಯ ನಟ

ಆದರೆ ‘ಟಾಕ್ಸಿಕ್’ ಸಿನಿಮಾನಲ್ಲಿ ಅವರೊಟ್ಟಿಗೆ ನಟಿಸಿ, ಅವರನ್ನು ಹತ್ತಿರದಿಂದ ನೋಡಿದ ಬಳಿಕ ನಾನು ಅವರ ಫ್ಯಾನ್ ಆದೆ ಎಂದಿದ್ದಾರೆ ಹುಮಾ.

   ‘ಟಾಕ್ಸಿಕ್’ ಸಿನಿಮಾನಲ್ಲಿ

ಸಿನಿಮಾಕ್ಕೆ ಅವರು ಹಾಕುವ ಶ್ರಮ ಅದ್ಭುತ. ಅವರನ್ನು ನೋಡಿ, ಅವರೊಟ್ಟಿಗೆ ಕೆಲಸ ಮಾಡಿ ನಾನು ಸಾಕಷ್ಟು ಕಲಿತೆ ಎಂದಿದ್ದಾರೆ.

ಸಾಕಷ್ಟು ಕಲಿತೆ ಎಂದ ನಟಿ

ಹುಮಾ ಖುರೇಷಿ ಅವರು ‘ಟಾಕ್ಸಿಕ್’ ಸಿನಿಮಾನಲ್ಲಿ ಎಲಿಜಬೆತ್ ಹೆಸರಿನ ಪಾತ್ರದಲ್ಲಿ ನಟಿಸಿದ್ದಾರೆ.

ಎಲಿಜಬೆತ್ ಹೆಸರಿನ ಪಾತ್ರ