ರಕುಲ್ ಪ್ರೀತ್ ಸಿಂಗ್​ಗೆ ಉಡುಗೊರೆಯಾಗಿ ಸಿಕ್ಕಿತೇ ಐಶಾರಾಮಿ ಮನೆ?

03 June 2025

By  Manjunatha

ರಕುಲ್ ಪ್ರೀತ್ ಸಿಂಗ್ ಪ್ಯಾನ್ ಇಂಡಿಯಾ ನಟಿ. ಹಲವಾರು ಭಾಷೆಗಳ ಸಿನಿಮಾಗಳಲ್ಲಿ ರಕುಲ್ ನಟಿಸಿದ್ದಾರೆ.

 ನಟಿ ರಕುಲ್ ಪ್ರೀತ್ ಸಿಂಗ್

ರಕುಲ್ ನಟನೆ ಆರಂಭಿಸಿದ್ದು ಕನ್ನಡದ ‘ಗಿಲ್ಲಿ’ ಸಿನಿಮಾ ಮೂಲಕ, ಆ ನಂತರ ಅವರು ಸ್ಟಾರ್ ನಟಿಯಾದರು.

  ಕನ್ನಡದ ‘ಗಿಲ್ಲಿ’ ಸಿನಿಮಾ

ಮುಂಬೈ ಮೂಲದ ರಕುಲ್ ಪ್ರೀತ್ ಸಿಂಗ್ ಅವರು ಹೈದರಾಬಾದ್​ನಲ್ಲಿ ಒಂದು ಐಶಾರಾಮಿ ಮನೆ ಹೊಂದಿದ್ದಾರೆ.

   ಐಶಾರಾಮಿ ಮನೆ ಇದೆ

ಆದರೆ ಅವರ ಹೈದರಾಬಾದ್ ಮನೆ ಅವರಿಗೆ ಉಡುಗೊರೆಯಾಗಿ ಧಕ್ಕಿದೆ, ಖ್ಯಾತ ನಿರ್ಮಾಪಕ ಒಬ್ಬರು ಅವರಿಗೆ ಅದನ್ನು ಕೊಡಿಸಿದ್ದಾರೆ ಎನ್ನಲಾಗುತ್ತಿದೆ.

   ಉಡುಗೊರೆಯಾಗಿ ಮನೆ

ಈ ಬಗ್ಗೆ ಪಾಡ್​ಕಾಸ್ಟ್ ಒಂದರಲ್ಲಿ ಮಾತನಾಡಿರುವ ನಟಿ ರಕುಲ್ ಪ್ರೀತ್ ಸಿಂಗ್, ಸುದ್ದಿಯ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

      ನಟಿ ರಕುಲ್ ಸ್ಪಷ್ಟನೆ

ರಕುಲ್ ಅವರ ಹೈದರಾಬಾದ್ ಮನೆ ಅವರಿಗೆ ಉಡುಗೊರೆಯಾಗಿ ಬಂದಿದ್ದಲ್ಲವಂತೆ. ಅವರೇ ಅದನ್ನು ಕಟ್ಟಿಸಿದ್ದಂತೆ.

    ಅವರೇ ಕಟ್ಟಿಸಿದ ಮನೆ

ಮನೆ ಉಡುಗೊರೆಯಾಗಿ ಬಂದಿರುವುದು ಎಂಬ ಸುದ್ದಿ ಹರಿದಾಡಿದಾಗ ರಕುಲ್​ಗೆ ಹಾಗೂ ಅವರ ತಂದೆಗೆ ಬಹಳ ಸಿಟ್ಟು ಬಂದಿತ್ತಂತೆ.

   ಬಹಳ ಸಿಟ್ಟು ಬಂದಿತ್ತು

ಅಂದಹಾಗೆ ರಕುಲ್ ಪ್ರೀತ್ ಸಿಂಗ್ ಕಳೆದ ವರ್ಷವಷ್ಟೆ ಬಾಲಿವುಡ್​ನ ಯುವ ನಿರ್ಮಾಪಕನೊಟ್ಟಿಗೆ ವಿವಾಹ ಆಗಿದ್ದಾರೆ.

     ನಿರ್ಮಾಪಕನ ಜೊತೆ