ಬಾಲಿವುಡ್ ನಟನೊಟ್ಟಿಗೆ ಪ್ರೀತಿಯಲ್ಲಿ ಬಿದ್ದರೇ ನಟಿ ಶ್ರೀಲೀಲಾ

30 Mar 2025

By  Manjunatha

ಕನ್ನಡದ ನಟಿ ಶ್ರೀಲೀಲಾ, ತೆಲುಗು ಚಿತ್ರರಂಗದಲ್ಲಿ ಟಾಪ್ ನಟಿಯಾಗಿ ಗುರುತಿಸಿಕೊಂಡಿದ್ದರು. ಸ್ಟಾರ್ ನಟರೊಟ್ಟಿಗೆ ನಟಿಸಿದರು.

   ಕನ್ನಡದ ನಟಿ ಶ್ರೀಲೀಲಾ

ಇದೀಗ ಶ್ರೀಲೀಲಾ ಬಾಲಿವುಡ್​ಗೆ ಪದಾರ್ಪಣೆ ಮಾಡಿದ್ದಾರೆ. ಈಗಾಗಲೇ ಎರಡು ಮೂರು ಹಿಂದಿ ಸಿನಿಮಾ ಅವಕಾಶ ಬಾಚಿಕೊಂಡಿದ್ದಾರೆ.

 ಬಾಲಿವುಡ್​ಗೆ ಪದಾರ್ಪಣೆ

ಶ್ರೀಲೀಲಾ ಬಾಲಿವುಡ್​ಗೆ ಕಾಲಿಡುತ್ತಿದ್ದಂತೆ ಅವರ ಹೆಸರು ಬಾಲಿವುಡ್​ನ ಯುವ ನಾಕನೊಟ್ಟಿಗೆ ಥಳಲು ಹಾಕಿಕೊಂಡಿದೆ.

     ಯುವ ನಾಕನೊಟ್ಟಿಗೆ 

ಶ್ರೀಲೀಲಾ, ‘ಆಶಿಖಿ 3’ ಸಿನಿಮಾದಲ್ಲಿ ಕಾರ್ತಿಕ್ ಆರ್ಯನ್ ಜೊತೆಗೆ ನಟಿಸಲಿದ್ದಾರೆ. ಚಿತ್ರೀಕರಣ ಚಾಲ್ತಿಯಲ್ಲಿದೆ.

    ‘ಆಶಿಖಿ 3’ ಸಿನಿಮಾದಲ್ಲಿ

ಇದೀಗ ಶ್ರೀಲೀಲಾ ಹೆಸರು ಕಾರ್ತಿಕ್ ಆರ್ಯನ್ ಜೊತೆ ಸೇರಿಕೊಂಡಿದೆ. ಇಬ್ಬರೂ ಪ್ರೀತಿಯಲ್ಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

ಕಾರ್ತಿಕ್ ಆರ್ಯನ್ ಜೊತೆ

ಶ್ರೀಲೀಲಾ, ಕಾರ್ತಿಕ್ ಆರ್ಯನ್ ಅವರ ಮನೆಯ ಖಾಸಗಿ ಕಾರ್ಯಕ್ರಮದಲ್ಲಿ ಸಹ ಭಾಗಿ ಆಗಿದ್ದರು. ಕಾರ್ತಿಕ್ ಕುಟುಂಬದವರೊಟ್ಟಿಗೆ ಎಂಜಾಯ್ ಮಾಡಿದ್ದಾರೆ.

  ಕಾರ್ಯಕ್ರಮದಲ್ಲಿ  ಭಾಗಿ

ಕಾರ್ತಿಕ್ ಆರ್ಯನ್ ತಾಯಿ ಸಹ, ನನಗೆ ಸೊಸೆಯಾಗಿ ವೈದ್ಯೆಯೇ ಬರಬೇಕು ಎಂದು ಹೇಳಿದ್ದಾರೆ. ಶ್ರೀಲೀಲಾ, ನಟಿಯಷ್ಟೆ ಅಲ್ಲ ವೈದ್ಯೆಯೂ ಸಹ.

 ಸೊಸೆಯಾಗಿ ವೈದ್ಯೆ ಬೇಕು

ಇತ್ತೀಚೆಗೆ ಕಾರ್ತಿಕ್ ಆರ್ಯನ್ ಶ್ರೀಲೀಲಾ ಜೊತೆಗಿನ ಶೂಟಿಂಗ್ ಫೋಟೊ ಹಂಚಿಕೊಂಡಿದ್ದು, ಅದರಲ್ಲೂ ಪ್ರೀತಿಯ ಮಾತಿದೆ.

      ಕಾರ್ತಿಕ್ -ಶ್ರೀಲೀಲಾ

ಶ್ರೀಲೀಲಾ ಇದೀಗ ಕೆಲ ತೆಲುಗು ಸಿನಿಮಾಗಳು, ಎರಡು ಹಿಂದಿ ಸಿನಿಮಾ, ಎರಡು ತಮಿಳು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

 ಹಲವು ಸಿನಿಮಾ ಕೈಯಲ್ಲಿ