ಮುಂದಿನ ವರ್ಷ ನಡೆಯಲಿದೆ ಜಾನ್ಹವಿ ಕಪೂರ್ ಮದುವೆ?

07DEC 2025

By  Manjunatha

ಜಾನ್ಹವಿ ಕಪೂರ್ ಬಾಲಿವುಡ್​ನ ಬಲು ಬೇಡಿಕೆಯ ಯುವ ನಟಿಯರಲ್ಲಿ ಮೊದಲಿಗರು.

    ನಟಿ ಜಾನ್ಹವಿ ಕಪೂರ್

ಜಾನ್ಹವಿ ಕಪೂರ್ ಇತ್ತೀಚೆಗೆ ದಕ್ಷಿಣದ ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ. ಇದೀಗ ರಾಮ್ ಚರಣ್ ಜೊತೆ ಸಿನಿಮಾ ಮಾಡುತ್ತಿದ್ದಾರೆ.

     ರಾಮ್ ಚರಣ್ ಜೊತೆ

ಜಾನ್ಹವಿ ಕಪೂರ್ ಹೆಸರು ಖ್ಯಾತ ಉದ್ಯಮಿ ಶಿಖರ್ ಫಾರಿಯಾ ಜೊತೆಗೆ ಹೆಚ್ಚಾಗಿ ಕೇಳಿ ಬರುತ್ತಿದೆ.

ಉದ್ಯಮಿ ಶಿಖರ್ ಫಾರಿಯಾ

ಜಾನ್ಹವಿ ಕಪೂರ್ ಮತ್ತು ಶಿಖರ್ ಫಾರಿಯಾ ಅವರುಗಳು ಪ್ರೇಮಿಗಳಾಗಿದ್ದು, ಒಟ್ಟಿಗೆ ಓಡಾಡುತ್ತಿದ್ದಾರೆ.

  ಒಟ್ಟಿಗೆ ಓಡಾಡುತ್ತಿದ್ದಾರೆ

ಜಾನ್ಹವಿ ಕಪೂರ್ ಮತ್ತು ಶಿಖರ್ ಫಾರಿಯಾ ಅವರುಗಳು ಮುಂದಿನ ವರ್ಷ ಫೆಬ್ರವರಿ ತಿಂಗಳಲ್ಲಿ ಮದುವೆ ಆಗಲಿದ್ದಾರೆ ಎನ್ನಲಾಗುತ್ತಿದೆ.

       ಫೆಬ್ರವರಿ ತಿಂಗಳಲ್ಲಿ

ಶಿಖರ್ ಫಾರಿಯಾ ಖ್ಯಾತ ಉದ್ಯಮಿಗಳ ಕುಟುಂಬಕ್ಕೆ ಸೇರಿದವರಾಗಿದ್ದು, ಜಾನ್ಹವಿ ಅವರೊಟ್ಟಿಗೆ ಬಹಳ ಹಳೆಯ ಗೆಳೆಯತನವಂತೆ ಅವರದ್ದು.

    ಜಾನ್ಹವಿ ಅವರೊಟ್ಟಿಗೆ

ಶಿಖರ್ ಫಾರಿಯಾ ಮತ್ತು ಜಾನ್ಹವಿ ಕಪೂರ್ ಅವರು ಒಟ್ಟಿಗೆ ಓಡಾಡುತ್ತಿದ್ದು, ಕೆಲ ದೇವಾಲಯಗಳಿಗೂ ಹೋಗಿ ಬಂದಿದ್ದಾರೆ.

   ದೇವಾಲಯಗಳಿಗೆ ಭೇಟಿ

ಜಾನ್ಹವಿ ಕಪೂರ್ ಪ್ರಸ್ತುತ ರಾಮ್ ಚರಣ್ ಜೊತೆಗೆ ‘ಪೆದ್ದಿ’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಹಿಂದಿಯ ಕೆಲ ಸಿನಿಮಾಗಳೈ ಕೈಯಲ್ಲಿವೆ.

      ‘ಪೆದ್ದಿ’ ಸಿನಿಮಾನಲ್ಲಿ