ಜಾನ್ಹವಿ ಕಪೂರ್​ಗೆ ಮತ್ತೊಂದು ತೆಲುಗು ಸಿನಿಮಾ ಆಫರ್, ಇದು ಎಷ್ಟನೇಯದ್ದು?

13 May 2025

By  Manjunatha

ಜಾನ್ಹವಿ ಕಪೂರ್, ಬಾಲಿವುಡ್​ನ ಬಲು ಬೇಡಿಕೆಯ ಯುವ ಸ್ಟಾರ್ ನಟಿ. ಹಲವು ಸಿನಿಮಾ ಅವರ ಕೈಯಲ್ಲಿವೆ.

   ಬೇಡಿಕೆಯ ಯುವ  ನಟಿ

ಇತ್ತೀಚೆಗೆ ಜಾನ್ಹವಿ ಕಪೂರ್ ಅವರಿಗೆ ತೆಲುಗು ಚಿತ್ರರಂಗದಲ್ಲಿ ಬಲು ಬೇಡಿಕೆ ಕುದುರಿದೆ. ಈಗಾಗಲೇ ಕೆಲ ಸಿನಿಮಾ ಕೈಯಲ್ಲಿವೆ.

    ನಟಿ ಜಾನ್ಹವಿ ಕಪೂರ್

ಜಾನ್ಹವಿ ಕಪೂರ್, ಜೂ ಎನ್​ಟಿಆರ್ ನಟನೆಯ ‘ದೇವರ’ ಸಿನಿಮಾನಲ್ಲಿ ನಟಿಸಿದ್ದು, ಅದು ಬಿಡುಗಡೆ ಆಗಿದೆ.

 ಜೂ ಎನ್​ಟಿಆರ್ ಸಿನಿಮಾ

ಇದೀಗ ರಾಮ್ ಚರಣ್ ಜೊತೆಗೆ ‘ಪೆದ್ದಿ’ ಸಿನಿಮಾದಲ್ಲಿ ಜಾನ್ಹವಿ ನಟಿಸುತ್ತಿದ್ದಾರೆ. ಶೂಟಿಂಗ್ ಚಾಲ್ತಿಯಲ್ಲಿದೆ.

      ‘ಪೆದ್ದಿ’ ಸಿನಿಮಾದಲ್ಲಿ

‘ದೇವರ 2’ ಸಿನಿಮಾದ ಚಿತ್ರೀಕರಣ ಪ್ರಾರಂಭ ಆಗಲಿದ್ದು, ಆ ಸಿನಿಮಾನಲ್ಲಿಯೂ ಜಾನ್ಹವಿ ಕಪೂರ್ ಇರುವುದು ಖಾತ್ರಿ.

       ‘ದೇವರ 2’ ಸಿನಿಮಾ

ಇದೀಗ ಹೊಸ ತೆಲುಗು ಸಿನಿಮಾ ಆಫರ್ ಒಂದು ಜಾನ್ಹವಿ ಕಪೂರ್ ಅವರನ್ನು ಹುಡುಕಿ ಬಂದಿದೆ.

  ತೆಲುಗು ಸಿನಿಮಾ ಆಫರ್

‘ಜಗದೇಕ ವೀರುಡು ಅತಿಲೋಕ ಸುಂದರಿ’ ಸಿನಿಮಾದ ಎರಡನೇ ಭಾಗದಲ್ಲಿ ಜಾನ್ಹವಿ ನಾಯಕಿ ಆಗಲಿದ್ದಾರಂತೆ.

ಸಿನಿಮಾದ ಎರಡನೇ ಭಾಗ

ಈ ಸಿನಿಮಾನಲ್ಲಿ ಜಾನ್ಹವಿ ಕಪೂರ್ ಎದುರು ರಾಮ್ ಚರಣ್ ತೇಜ ನಾಯಕನಾಗಿ ಮಿಂಚಲಿದ್ದಾರೆ ಎನ್ನಲಾಗುತ್ತಿದೆ.

ಜಾನ್ಹವಿ ಕಪೂರ್ ನಾಯಕಿ