ಜಾನ್ಹವಿ ಕಪೂರ್ ಹಿಡಿದಿರುವ ಈ ಬ್ಯಾಗಿನ ಬೆಲೆಗೆ ಎರಡು ಹೊಸ ಮಾರುತಿ ಕಾರು ಖರೀದಿಸಬಹುದು

17 Apr 2025

By  Manjunatha

ಜಾನ್ಹವಿ ಕಪೂರ್, ಬಾಲಿವುಡ್​ನ ಮೋಸ್ಟ್ ಸ್ಟೈಲಿಷ್ ಯುವನಟಿ. ಸ್ಟೈಲ್​ಗಾಗಿ ಅವರು ಲಕ್ಷಾಂತರ ರೂಪಾಯಿ ಹಣ ವ್ಯಯಿಸುತ್ತಾರೆ.

      ಸ್ಟೈಲಿಷ್ ಯುವನಟಿ

ಐಶಾರಾಮಿ ಉಡುಪುಗಳನ್ನೇ ಧರಿಸುವ ಜಾನ್ಹವಿ ಕಪೂರ್, ಬ್ಯಾಗುಗಳ ಮೇಲಂತೂ ಕೋಟ್ಯಂತರ ರೂಪಾಯಿ ಹಣ ವ್ಯಯಿಸುತ್ತಾರೆ.

 ಕೋಟ್ಯಂತರ ಬಂಡವಾಳ

10, 15-20 ಲಕ್ಷ ರೂಪಾಯಿ ಬೆಲೆ ಬಾಳುವ ಹಲವು ಬ್ಯಾಗುಗಳ ಸಂಗ್ರಹವನ್ನೇ ಜಾನ್ಹವಿ ಕಪೂರ್ ಹೊಂದಿದ್ದಾರೆ.

ದುಬಾರಿ ಬ್ಯಾಗುಗಳ ಸಂಗ್ರಹ

ಜಾನ್ಹವಿ ಕಪೂರ್ ಇತ್ತೀಚೆಗೆ ಏರ್​ಪೋರ್ಟ್​​ನಲ್ಲಿ ಕಾಣಿಸಿಕೊಂಡಾಗ ಅವರು ಕೈಯಲ್ಲಿ ಹಿಡಿದಿದ್ದ ಕ್ರೀಂ ಬಣ್ಣದ ಬ್ಯಾಗು ಗಮನ ಸೆಳೆಯಿತು.

     ಗಮನ ಸೆಳೆದ ಬ್ಯಾಗು

ಜಾನ್ಹವಿ ಕಪೂರ್ ಕಪೂರ್ ಹಿಡಿದಿರುವ ಈ ಬ್ಯಾಗಿನ ಬೆಲೆಯಲ್ಲಿ ಎರಡು ಹೊಸ ಮಾರುತಿ ಕಾರು ಖರೀದಿಸಬಹುದು.

     ಎರಡು ಹೊಸ  ಕಾರು

ಜಾನ್ಹವಿ ಹಿಡಿದಿರುವ ಈ ಕ್ರೀಂ ಬಣ್ಣದ ಸಾಧಾರಣ ಸೈಜ್​ನ ಹ್ಯಾಂಡ್​ ಬ್ಯಾಗಿನ ಬೆಲೆ ಬರೋಬ್ಬರಿ 15.90 ಲಕ್ಷ ರೂಪಾಯಿಗಳು.

ಬ್ಯಾಗಿನ ಬೆಲೆ ಎಷ್ಟು ಲಕ್ಷ?

ಜಾನ್ಹವಿ ಕಪೂರ್ ಹಿಡಿದಿರುವುದು ಹರ್ಮಸ್ ಬ್ರ್ಯಾಂಡಿನ ಬ್ಯಾಗು. ವಿಶ್ವದ ದುಬಾರಿ ಬ್ಯಾಗು ತಯಾರಿಸುವ ಕಂಪೆನಿಗಳಲ್ಲಿ ಇದು ಒಂದು.

ಯಾವ ಬ್ರ್ಯಾಂಡಿನ ಬ್ಯಾಗು

ಜಾನ್ಹವಿ ಕಪೂರ್ ಬಳಿ ಹೀಗೆ ಬಲು ದುಬಾರಿ ಆಗಿರುವ ಹಲವಾರು ಬ್ಯಾಗುಗಳಿವೆ. ಪ್ರತಿ ಬ್ಯಾಗಿನ ಬೆಲೆ ಐದು ಲಕ್ಷಕ್ಕೂ ಮೇಲಿದೆ.

   ಐದು ಲಕ್ಷಕ್ಕೂ  ಹೆಚ್ಚಿದೆ