ಬಾಯ್​​ಫ್ರೆಂಡ್ ಜೊತೆ ಕರಣ್ ಜೋಹರ್​​ ಶೋಗೆ ಬರಲಿರುವ ಜಾನ್ಹವಿ ಕಪೂರ್

16 SEP 2026

By  Manjunatha

ಜಾನ್ಹವಿ ಕಪೂರ್ ಬಾಲಿವುಡ್​​ನ ಸ್ಟಾರ್ ನಟಿ, ಹಲವು ಸಿನಿಮಾಗಳಲ್ಲಿ ಅವರು ನಟನೆ ಮಾಡುತ್ತಿದ್ದಾರೆ.

  ಬಾಲಿವುಡ್​​ನ ಸ್ಟಾರ್ ನಟಿ

ಇತ್ತೀಚೆಗೆ ದಕ್ಷಿಣಕ್ಕೂ ಸಹ ಜಾನ್ಹವಿ ಕಪೂರ್ ಕಾಲಿರಿಸಿದ್ದು, ದೊಡ್ಡ ದೊಡ್ಡ ಸಿನಿಮಾಗಳಲ್ಲಿ ನಟಿಸಿದ್ದಾರೆ.

    ದಕ್ಷಿಣದಲ್ಲೂ ನಟನೆ

ಜಾನ್ಹವಿ ಕಪೂರ್ ಸಿನಿಮಾಗಳ ಜೊತೆಗೆ ತಮ್ಮ ಖಾಸಗಿ ಬದುಕಿನಿಂದಲೂ ಸಖತ್ ಸುದ್ದಿಯಲ್ಲಿ ಇರುತ್ತಾರೆ ಯಾವಾಗಲೂ.

 ಖಾಸಗಿ ಬದುಕಿನಿಂದಲೂ

ಜಾನ್ಹವಿ ಕಪೂರ್ ಅವರು ಉದ್ಯಮಿ ಶಿಖರ್ ಫಾರಿಯಾ ಜೊತೆಗೆ ಪ್ರೀತಿಯಲ್ಲಿದ್ದು, ಈ ವಿಷಯವನ್ನು ಗುಟ್ಟು ಮಾಡುವುದಿಲ್ಲ.

ಉದ್ಯಮಿ ಶಿಖರ್ ಫಾರಿಯಾ

ಬಾಯ್​​ಫ್ರೆಂಡ್ ಹೆಸರು ಹಚ್ಚೆ ಹಾಕಿಸಿಕೊಂಡಿರುವ ನಟಿ, ಬಾಯ್​​ಫ್ರೆಂಡ್ ಜೊತೆಗೆ ಕೈ-ಕೈ ಹಿಡಿದುಕೊಂಡು ಸುತ್ತಾಡುತ್ತಿರುತ್ತಾರೆ.

    ಬಾಯ್​​ಫ್ರೆಂಡ್ ಹೆಸರು

ಆದರೆ ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಬಾಯ್​​ಫ್ರೆಂಡ್ ಜೊತೆಗೆ ಕರಣ್ ಜೋಹರ್ ಶೋಗೆ ಬರಲಿದ್ದಾರೆ ನಟಿ.

    ಕರಣ್ ಜೋಹರ್ ಶೋ

ಜಾನ್ಹವಿ ಕಪೂರ್ ಅವರು ಬಾಯ್​​ಫ್ರೆಂಡ್ ಶಿಖರ್ ಫಾರಿಯಾ ಜೊತೆಗೆ ಕರಣ್ ಜೋಹರ್ ಶೋಗೆ ಬರಲಿದ್ದಾರೆ ಎನ್ನಲಾಗುತ್ತಿದೆ.

        ಶಿಖರ್ ಫಾರಿಯಾ

ಈ ಹಿಂದೆ ಒಮ್ಮೆ ಜಾನ್ಹವಿ ಕಪೂರ್ ಅವರು ಸಾರಾ ಅಲಿ ಖಾನ್ ಜೊತೆಗೆ ಶೋಗೆ ಅತಿಥಿಯಾಗಿ ಬಂದಿದ್ದರು.

  ಸಾರಾ ಅಲಿ ಖಾನ್ ಜೊತೆ