ಹಾಲಿವುಡ್​​ಗೆ ಹಾರಲಿದ್ದಾರೆ ನಟಿ ಜಾನ್ಹವಿ ಕಪೂರ್

08 OCT 2025

By  Manjunatha

ಜಾನ್ಹವಿ ಕಪೂರ್ ಬಾಲಿವುಡ್​ನ ಬೇಡಿಕೆಯ ನಟಿ, ದಕ್ಷಿಣದ ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ.

ಬಾಲಿವುಡ್ನ ಬೇಡಿಕೆಯ ನಟಿ

ಜಾನ್ಹವಿ ಈ ವರೆಗೆ ಯಾವುದೇ ದೊಡ್ಡ ಹಿಟ್ ಸಿನಿಮಾ ನೀಡಿಲ್ಲ, ಹಾಗೆಂದು ಅವರ ಬೇಡಿಕೆ ಕಡಿಮೆ ಆಗಿಲ್ಲ.

    ದೊಡ್ಡ ಹಿಟ್ ನೀಡಿಲ್ಲ

ಈಗಲೂ ಸಹ ಜಾನ್ಹವಿ ಕಪೂರ್ ಕೈಯಲ್ಲಿ ಕನಿಷ್ಟ ಐದರಿಂದ ಆರು ಸಿನಿಮಾಗಳು ಇವೆ.

  ಐದರಿಂದ ಆರು ಸಿನಿಮಾ

ಇದೀಗ ನಟಿ ಜಾನ್ಹವಿ ಕಪೂರ್, ಭಾರತೀಯ ಸಿನಿಮಾಗಳಲ್ಲದೆ ಹಾಲಿವುಡ್​ ಸಿನಿಮಾಗಳಲ್ಲೂ ನಟಿಸಲು ಮುಂದಾಗಿದ್ದಾರೆ.

  ಹಾಲಿವುಡ್​ ಸಿನಿಮಾಗಳು

ಜಾನ್ಹವಿ ಕಪೂರ್ ನಟಿಸಿರುವ ‘ಹೋಮ್​​ಬೌಂಡ್’ ಸಿನಿಮಾ ಅಂತರಾಷ್ಟ್ರೀಯ ಸಿನಿಮೋತ್ಸವಗಳಲ್ಲಿ ಸುದ್ದಿ ಮಾಡಿದೆ.

‘ಹೋಮ್​​ಬೌಂಡ್’ ಸಿನಿಮಾ

‘ಹೋಮ್​​ಬೌಂಡ್’ ಸಿನಿಮಾವನ್ನು ಭಾರತದಿಂದ ಆಸ್ಕರ್​​ಗೆ ಅಧಿಕೃತವಾಗಿ ಆಯ್ಕೆ ಮಾಡಿ ಸ್ಪರ್ಧೆಗೆ ಕಳಿಸಲಾಗಿದೆ.

 ಆಸ್ಕರ್​​ಗೆ ಅಧಿಕೃತ ಆಯ್ಕೆ

ಸಿನಿಮಾ ನೋಡಿದ ಶ್ರೇಷ್ಠ ನಿರ್ದೇಶಕ ಮಾರ್ಟಿನ್ ಸ್ಕೊರ್ಸೆಸಿ ಜಾನ್ಹವಿ ಕಪೂರ್ ನಟನೆಯನ್ನು ಕೊಂಡಾಡಿದ್ದಾರೆ.

     ಮಾರ್ಟಿನ್ ಸ್ಕೊರ್ಸೆಸಿ

ಅದರ ಬೆನ್ನಲ್ಲೆ ಜಾನ್ಹವಿ ಕಪೂರ್ ಅವರು ಹಾಲಿವುಡ್​​ ಸಿನಿಮಾಗಳಿಗೆ ಕಾಲಿಡಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

 ಹಾಲಿವುಡ್​​ ಸಿನಿಮಾಗಳಿಗೆ