ರಶ್ಮಿಕಾ ಮಂದಣ್ಣ ಸಿನಿಮಾವ ಕೊಂಡಾಡಿದ ಬಾಲಿವುಡ್ ನಟಿ ಜಾನ್ಹವಿ ಕಪೂರ್

10DEC 2025

By  Manjunatha

ಬಾಲಿವುಡ್ ನಟಿ ಜಾನ್ಹವಿ ಕಪೂರ್, ಇತ್ತೀಚೆಗೆ ಕೆಲ ತೆಲುಗು ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ.

     ನಟಿ ಜಾನ್ಹವಿ ಕಪೂರ್

ಈಗಾಗಲೇ ‘ದೇವರ’ನಲ್ಲಿ ನಟಿಸಿರುವ ಜಾನ್ಹವಿ, ಇದೀಗ ರಾಮ್ ಚರಣ್ ಜೊತೆ ‘ಪೆದ್ದಿ’ಯಲ್ಲಿ ನಟಿಸುತ್ತಿದ್ದಾರೆ.

     ರಾಮ್ ಚರಣ್ ಜೊತೆ

ಇದೀಗ ಜಾನ್ಹವಿ ಕಪೂರ್, ರಶ್ಮಿಕಾ ಮಂದಣ್ಣ ನಟಿಸಿರುವ ತೆಲುಗು ಸಿನಿಮಾ ಒಂದನ್ನು ಕೊಂಡಾಡಿದ್ದಾರೆ.

         ತೆಲುಗು ಸಿನಿಮಾ 

ರಶ್ಮಿಕಾ ಮಂದಣ್ಣ ನಟಿಸಿರುವ ‘ದಿ ಗರ್ಲ್​​ಫ್ರೆಂಡ್’ ಸಿನಿಮಾ ಇತ್ತೀಚೆಗಷ್ಟೆ ಒಟಿಟಿಗೆ ಬಂದಿದೆ.

 ‘ದಿ ಗರ್ಲ್​​ಫ್ರೆಂಡ್’ ಸಿನಿಮಾ

‘ದಿ ಗರ್ಲ್​​ಫ್ರೆಂಡ್’ ಸಿನಿಮಾ ನೋಡಿರುವ ಜಾನ್ಹವಿ ಕಪೂರ್, ಈ ಸಿನಿಮಾ ಎಲ್ಲರೂ ನೋಡಬೇಕಾದ ಸಿನಿಮಾ ಎಂದಿದ್ದಾರೆ.

  ನೋಡಬೇಕಾದ ಸಿನಿಮಾ

‘ದಿ ಗರ್ಲ್​​ಫ್ರೆಂಡ್’ ಸಿನಿಮಾದ ಸಬ್ಜೆಕ್ಟ್, ರಶ್ಮಿಕಾರ ನಟನೆ, ಸಿನಿಮಾ ನೀಡುತ್ತಿರುವ ಸಂದೇಶ ಜಾನ್ಹವಿಗೆ ಇಷ್ಟವಾಗಿದೆ.

   ಜಾನ್ಹವಿಗೆ ಇಷ್ಟವಾಗಿದೆ

‘ದಿ ಗರ್ಲ್​​ಫ್ರೆಂಡ್’ ಸಿನಿಮಾನಲ್ಲಿ ರಶ್ಮಿಕಾ ಮಂದಣ್ಣ ಮತ್ತು ಕನ್ನಡಿಗ ದೀಕ್ಷಿತ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

    ಕನ್ನಡಿಗ ದೀಕ್ಷಿತ್ ಶೆಟ್ಟಿ

ಜಾನ್ಹವಿ ಕಪೂರ್ ಅವರು ರಶ್ಮಿಕಾ ಮಂದಣ್ಣ ಅವರ ಸಿನಿಮಾ ನೋಡಿ ಮೆಚ್ಚಿಕೊಂಡಿರುವುದು ಅಭಿಮಾನಿಗಳಿಗೆ ಖುಷಿ ತಂದಿದೆ.

    ಅಭಿಮಾನಿಗಳಿಗೆ ಖುಷಿ