‘ಪೆದ್ದಿ’ ಸಿನಿಮಾಕ್ಕೆ ಜಾನ್ಹವಿ ಕಪೂರ್ ಪಡೆದ ಸಂಭಾವನೆ ಎಷ್ಟು ಕೋಟಿ?

26 May 2026

By  Manjunatha

ರಾಮ್ ಚರಣ್ ನಟನೆಯ ‘ಪೆದ್ದಿ’ ಸಿನಿಮಾ ಜೂನ್ 4 ರಂದು ಬಲು ಅದ್ಧೂರಿಯಾಗಿ ಬಿಡುಗಡೆ ಆಗಲಿದೆ.

   ‘ಪೆದ್ದಿ’ ಸಿನಿಮಾ ರಿಲೀಸ್

‘ಪೆದ್ದಿ’ ಸಿನಿಮಾಕ್ಕೆ ಬಾಲಿವುಡ್ ನಟಿ ಜಾನ್ಹವಿ ಕಪೂರ್ ನಾಯಕಿ, ಇದು ಅವರ ಎರಡನೇ ತೆಲುಗು ಸಿನಿಮಾ.

 ಜಾನ್ಹವಿ ಕಪೂರ್ ನಾಯಕಿ

ಅಂದಹಾಗೆ ‘ಪೆದ್ದಿ’ ಸಿನಿಮಾಕ್ಕೆ ಜಾನ್ಹವಿ ಕಪೂರ್ ಅವರು ದೊಡ್ಡ ಮೊತ್ತದ ಸಂಭಾವನೆಯನ್ನೇ ಪಡೆದುಕೊಂಡಿದ್ದಾರೆ.

ಪಡೆದ ಸಂಭಾವನೆ ಎಷ್ಟು?

‘ಪೆದ್ದಿ’ ಸಿನಿಮಾನಲ್ಲಿ ನಟಿಸಲು ಜಾನ್ಹವಿ ಕಪೂರ್ ಅವರಿಗೆ ಸುಮಾರು ಆರು ಕೋಟಿ ರೂಪಾಯಿ ಸಂಭಾವನೆ ನೀಡಲಾಗಿದೆ.

ಜಾನ್ಹವಿ ಪಡೆದ ಹಣ ಎಷ್ಟು

ಜಾನ್ಹವಿ ಕಪೂರ್ ಸಾಮಾನ್ಯವಾಗಿ ಪ್ರತಿ ಸಿನಿಮಾಕ್ಕೆ 5 ರಿಂದ ಏಳು ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರಂತೆ.

     5 ರಿಂದ ಏಳು ಕೋಟಿ

‘ಪೆದ್ದಿ’ಗೆ ಜಾನ್ಹವಿ ಅವರ ಶೂಟಿಂಗ್ ಸಮಯ ಕಡಿಮೆ ಇದ್ದ ಕಾರಣ ಆರು ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ.

  ಆರು ಕೋಟಿ ರೂಪಾಯಿ

ಅದು ಮಾತ್ರವೇ ಅಲ್ಲದೆ, ‘ಪೆದ್ದಿ’ ಸಿನಿಮಾದ ಪ್ರಚಾರಕ್ಕೆ ಬರಲು ಜಾನ್ಹವಿ ಕಪೂರ್ ಅವರಿಗೆ ಪ್ರತ್ಯೇಕ ಸಂಭಾವನೆ ನೀಡಲಾಗಿದೆಯಂತೆ.

  ಪ್ರಚಾರಕ್ಕೆ ಬರಲು ಹಣ?

ಜೂನ್ 4 ರಂದು ‘ಪೆದ್ದಿ’ ಸಿನಿಮಾ ಬಿಡುಗಡೆ ಆಗಲಿದ್ದು, ಜಾನ್ಹವಿಯ ನಟನೆ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.

    ಜೂನ್ 4 ರಂದು ‘ಪೆದ್ದಿ’