‘ಪೆದ್ದಿ’ ಭೂಪಾಲ್ ಇವೆಂಟ್​​ನಲ್ಲಿ ಮಿಂಚಿದ ನಟಿ ಜಾನ್ಹವಿ ಕಪೂರ್

23 May 2026

By  Manjunatha

ರಾಮ್ ಚರಣ್ ನಟನೆಯ ‘ಪೆದ್ದಿ’ ಸಿನಿಮಾದ ಪ್ರಚಾರ ಬಲು ಜೋರಾಗಿ ಸಾಗುತ್ತಿದೆ.

 ‘ಪೆದ್ದಿ’ ಸಿನಿಮಾದ ಪ್ರಚಾರ

‘ಪೆದ್ದಿ’ ಸಿನಿಮಾ ವತಿಯಿಂದ ಇಂದು (ಮೇ 23) ಭೂಪಾಲ್​​ನಲ್ಲಿ ಅದ್ಧೂರಿ ಮ್ಯೂಸಿಕ್ ನೈಟ್ ಆಯೋಜಿಸಲಾಗಿದೆ.

 ಅದ್ಧೂರಿ ಮ್ಯೂಸಿಕ್ ನೈಟ್

ಎಆರ್ ರೆಹಮಾನ್ ಅವರ ಮ್ಯೂಸಿಕಲ್ ನೈಟ್ ಇದಾಗಿದ್ದು, ಕಾರ್ಯಕ್ರಮದಲ್ಲಿ ‘ಪೆದ್ದಿ’ ಚಿತ್ರತಂಡ ಮುಖ್ಯ ಅತಿಥಿ.

ಎಆರ್ ರೆಹಮಾನ್ ಸಂಗೀತ

‘ಪೆದ್ದಿ’ ಸಿನಿಮಾದ ನಾಯಕಿ ಜಾನ್ಹವಿ ಕಪೂರ್ ಸಹ ‘ಪೆದ್ದಿ’ ಭೂಪಾಲ್ ಇವೆಂಟ್​​ಗೆ ಹಾಜರಿ ಹಾಕಿದ್ದು, ಗಮನ ಸೆಳೆದಿದ್ದಾರೆ.

ನಾಯಕಿ ಜಾನ್ಹವಿ ಕಪೂರ್

‘ಪೆದ್ದಿ’ ಸಿನಿಮಾನಲ್ಲಿ ಗ್ಲಾಮರಸ್ ಉಡುಪುಗಳನ್ನು ಧರಿಸಿರುವ ಜಾನ್ಹವಿ, ಇವೆಂಟ್​​ನಲ್ಲಿ ಸುಂದರವಾದ ಉಡುಪು ಧರಿಸಿದ್ದರು.

  ಗ್ಲಾಮರಸ್ ಉಡುಪುಗಳು

ನೀಲಿ ಬಣ್ಣದ ಗ್ರ್ಯಾಂಡ್ ಆದ ಲೆಹಂಗಾ ತೊಟ್ಟು ಮಿಂಚಿದ್ದ ನಟಿ ಜಾನ್ಹವಿ ಕಪೂರ್, ಸುಂದರವಾಗಿ ಕಾಣುತ್ತಿದ್ದರು.

ಗ್ರ್ಯಾಂಡ್ ಲೆಹಂಗಾ ತೊಟ್ಟು

ಜಾನ್ಹವಿ ಕಪೂರ್, ವೇದಿಕೆ ಮೇಲೆ ಭಾಷಣ ಸಹ ಮಾಡಿದ್ದು, ಎಲ್ಲರೂ ‘ಪೆದ್ದಿ’ ಸಿನಿಮಾ ನೋಡುವಂತೆ ಮನವಿ ಮಾಡಿದ್ದಾರೆ.

    ವೇದಿಕೆ ಮೇಲೆ ಭಾಷಣ

ರಾಮ್ ಚರಣ್, ಜಾನ್ಹವಿ ಕಪೂರ್, ಶಿವರಾಜ್ ಕುಮಾರ್ ನಟನೆಯ ‘ಪೆದ್ದಿ’ ಸಿನಿಮಾ ಜೂನ್ 4 ರಂದು ಬಿಡುಗಡೆ ಆಗಲಿದೆ.

ಜೂನ್ 4 ರಂದು ಬಿಡುಗಡೆ