ಹೊಸ ಉದ್ಯಮ ಆರಂಭಿಸಿದ ನಟಿ ಜಾನ್ಹವಿ ಕಪೂರ್: ಯಾವುದದು?

10 OCT 2026

By  Manjunatha

ಜಾನ್ಹವಿ ಕಪೂರ್, ಬಾಲಿವುಡ್​​ನ ಬೇಡಿಕೆಯ ನಟಿ, ದಕ್ಷಿಣ ಭಾರತದ ಕೆಲ ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ.

     ನಟಿ ಜಾನ್ಹವಿ ಕಪೂರ್

ಜಾನ್ಹವಿ ಕಪೂರ್ ನಟನೆ ಜೊತೆಗೆ ಕೆಲ ಉದ್ಯಮಗಳಲ್ಲಿ ಈಗಾಗಲೇ ಹೂಡಿಕೆ ಮಾಡಿದ್ದಾರೆ.

     ಹೂಡಿಕೆ ಮಾಡಿದ್ದಾರೆ

ಇದೀಗ ತಮ್ಮದೇ ಹೊಸ ಕಂಪೆನಿಯೊಂದನ್ನು ಜಾನ್ಹವಿ ಕಪೂರ್ ಪ್ರಾರಂಭ ಮಾಡಿದ್ದಾರೆ. ಆದರೆ ಅದರ ಘೋಷಣೆ ಇನ್ನೂ ಮಾಡಿಲ್ಲ.

ಜಾನ್ಹವಿ ಕಪೂರ್ ಪ್ರಾರಂಭ

ಜಾನ್ಹವಿ ಸೌಂದರ್ಯವರ್ಧಕ ಸಂಸ್ಥೆ ಆರಂಭಿಸಿದ್ದು ಅದಕ್ಕೆ ಸಂಬಂಧಿಸಿದ ಕೆಲ ಚಿತ್ರಗಳನ್ನು ಜಾನ್ಹವಿ ಹಂಚಿಕೊಂಡಿದ್ದಾರೆ.

ಚಿತ್ರಗಳನ್ನು ಹಂಚಿಕೊಂಡಿ

ಜಾನ್ಹವಿ ಕಪೂರ್, ತುಟಿಗೆ ಲಿಪ್​​ಸ್ಟಿಕ್ ಹಚ್ಚಿಕೊಳ್ಳುತ್ತಿರುವ ಹಲವಾರು ಚಿತ್ರಗಳನ್ನು ಒಮ್ಮೆಲೆ ಇನ್​​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

   ಇನ್​​ಸ್ಟಾಗ್ರಾಂನಲ್ಲಿ ಚಿತ್ರ

ಆದರೆ ತಾವು ಹಚ್ಚಿಕೊಳ್ಳುತ್ತಿರುವ ಲಿಪ್​​ಸ್ಟಿಕ್​​ನ ಬ್ರ್ಯಾಂಡ್​​ನ ಹೆಸರನ್ನು ಅವರು ರಿವೀಲ್ ಮಾಡಿಲ್ಲ.

    ಲಿಪ್​​ಸ್ಟಿಕ್​​ನ ಬ್ರ್ಯಾಂಡ್​​

ಇದನ್ನು ನೋಡಿದ ಹಲವು ನೆಟ್ಟಿಗರು, ನಟಿಯ ಹೊಸ ಬ್ರ್ಯಾಂಡ್ ಇದಾಗಿದ್ದು, ಪ್ರಚಾರಕ್ಕಾಗಿ ಚಿತ್ರ ಹಂಚಿಕೊಂಡಿದ್ದಾರೆ ಎಂದಿದ್ದಾರೆ.

  ನಟಿಯ ಹೊಸ ಬ್ರ್ಯಾಂಡ್

ಈಗಾಗಲೇ ಬಾಲಿವುಡ್​​ನ ಕೆಲ ನಟಿಯರು ಸೌಂದರ್ಯವರ್ಧಕ ಸಂಸ್ಥೆಗಳ ಮಾಲಕಿಯರಾಗಿದ್ದಾರೆ. ಈಗ ಜಾನ್ಹವಿಯೂ ಸಹ.

      ಸೌಂದರ್ಯವರ್ಧಕ