ತಮ್ಮ ಕುಡಿತದ ಚಟದ ಬಗ್ಗೆ ಬಹಿರಂಗವಾಗಿ ಮಾತನಾಡಿದ ಜಾನ್ಹವಿ ಕಪೂರ್

19 APRL 2026

By  Manjunatha

ಜಾನ್ಹವಿ ಕಪೂರ್, ಬಾಲಿವುಡ್​​ನ ಸ್ಟಾರ್ ಯುವನಟಿ, ದಕ್ಷಿಣದ ಸಿನಿಮಾಗಳಲ್ಲಿಯೂ ಅವರು ನಟಿಸುತ್ತಿದ್ದಾರೆ.

    ನಟಿ ಜಾನ್ಹವಿ ಕಪೂರ್

ಸುಂದರವಾಗಿ, ಗ್ಲಾಮರಸ್ ಆಗಿ ಮತ್ತು ಒಳ್ಳೆಯ ನಟಿಯೂ ಆಗಿರುವ ಜಾನ್ಹವಿಗೆ ಸಾಕಷ್ಟು ಅಭಿಮಾನಿಗಳಿದ್ದಾರೆ.

   ಗ್ಲಾಮರಸ್ ನಟಿ ಜಾನ್ಹವಿ

ತಮ್ಮ ಬಗ್ಗೆ, ತಮ್ಮ ಜೀವನದ ಬಗ್ಗೆ ಮುಕ್ತವಾಗಿ ಮಾತನಾಡುವ ಜಾನ್ಹವಿ, ಇದೀಗ ತಮ್ಮ ಕುಡಿತದ ಚಟದ ಬಗ್ಗೆ ಮಾತನಾಡಿದ್ದಾರೆ.

ಮುಕ್ತವಾಗಿ ಮಾತನಾಡುವ

ಜಾನ್ಹವಿ ಕಪೂರ್ ಕುಡಿತದ ಚಟಕ್ಕೆ ಒಳಗಾಗಿದ್ದರಂತೆ. ಆದರೆ ಅದರಿಂದ ಸಂಪೂರ್ಣವಾಗಿ ಹೊರಬಂದಿರುವುದಾಗಿ ಹೇಳಿದ್ದಾರೆ.

ಕುಡಿತದ ಚಟಕ್ಕೆ ಬಿದ್ದಿದ್ದರು

ಮೊದಲೆಲ್ಲ ಪಾರ್ಟಿಗಳಲ್ಲಿ ಯಾವಾಗಲಾದರೂ ಒಮ್ಮೆ ಕುಡಿಯುತ್ತಿದ್ದೆ, ಆದರೆ ಬರು ಬರುತ್ತಾ ಅದು ಅಭ್ಯಾಸವಾಯ್ತು ಎಂದಿದ್ದಾರೆ.

   ಕುಡಿತ ಅಭ್ಯಾಸವಾಯ್ತು

ಕುಡಿತದ ಚಟ ನನ್ನನ್ನು ಆವರಿಸಿಕೊಂಡಿತ್ತು. ಮದ್ಯ ನನ್ನ ಮೇಲೆ ನಿಯಂತ್ರಣ ಸಾಧಿಸಿತ್ತು ಎಂದಿದ್ದಾರೆ ಜಾನ್ಹವಿ.

  ನನ್ನ ಆವರಿಸಿಕೊಂಡಿತ್ತು

ಪ್ರತಿ ದಿನವೂ ಸಹ ನಾನು ಹ್ಯಾಂಗೋವರ್​​ನಿಂದಲೇ ಏಳುತ್ತಿದ್ದೆ. ನನ್ನ ಜೀವನಕ್ಕೆ ಅದು ಸಾಕಷ್ಟು ಹಾನಿ ಮಾಡಿತ್ತು ಎಂದಿದ್ದಾರೆ ನಟಿ.

 ಜೀವನಕ್ಕೆ ಸಾಕಷ್ಟು ಹಾನಿ

ಆದರೆ ಅದರಿಂದ ಆದ, ಆಗಬಹುದಾದ ಸಮಸ್ಯೆಗಳನ್ನು ಕಂಡುಕೊಂಡು ಅದರಿಂದ ನಾನು ಹೊರ ಬಂದೆ ಎಂದಿದ್ದಾರೆ.

      ನಾನು ಹೊರ ಬಂದೆ