ಶಾಹಿದ್ ಕಪೂರ್ ಜೊತೆ ನಟಿಸಲು ರೆಡಿಯಾದ ನಟಿ ಜಾನ್ಹವಿ ಕಪೂರ್

06 May 2026

By  Manjunatha

ಜಾನ್ಹವಿ ಕಪೂರ್ ಬಾಲಿವುಡ್​​ನ ಸ್ಟಾರ್ ಯುವ ನಟಿ, ದೊಡ್ಡ ಹಿಟ್ ಇಲ್ಲದಿದ್ದರೂ ಅವರಿಗೆ ಬೇಡಿಕೆ ಇದೆ.

    ನಟಿ ಜಾನ್ಹವಿ ಕಪೂರ್

ಇತ್ತೀಚೆಗೆ ಜಾನ್ಹವಿ ಕಪೂರ್ ದಕ್ಷಿಣದ ಸಿನಿಮಾಗಳಲ್ಲಿ ಕೊಂಚ ಬ್ಯುಸಿ ಆಗಿದ್ದರು. ಜೊತೆಗೆ ಹಿಂದಿ ಸಿನಿಮಾನಲ್ಲೂ ನಟಿಸುತ್ತಿದ್ದರು.

  ದಕ್ಷಿಣದ ಸಿನಿಮಾಗಳಲ್ಲಿ

ಇದೀಗ ಜಾನ್ಹವಿ ಕಪೂರ್ ಅವರು ಹೊಸ ಬಾಲಿವುಡ್ ಸಿನಿಮಾ ಒಪ್ಪಿಕೊಂಡಿದ್ದಾರೆ. ಇದು ಸಹ ರೊಮ್ಯಾಂಟಿಕ್ ಕತೆಯೇ ಆಗಿದೆ.

ಹೊಸ ಬಾಲಿವುಡ್ ಸಿನಿಮಾ

ಜಾನ್ಹವಿ ಕಪೂರ್ ಅವರು ಶಾಹಿದ್ ಕಪೂರ್ ನಾಯಕನಾಗಿ ನಟಿಸಲಿರುವ ಹೊಸ ಸಿನಿಮಾನಲ್ಲಿ ನಾಯಕಿಯಾಗಿ ನಟಿಸಲಿದ್ದಾರೆ.

ಶಾಹಿದ್ ಕಪೂರ್ ನಾಯಕ

‘ಬದಾಯಿ ಹೋ’ ಹೆಸರಿನ ಕಾಮಿಡಿ ಸಿನಿಮಾ ನೀಡಿದ್ದ ನಿರ್ದೇಶಕ ಅಮಿತ್ ಶರ್ಮಾ ಅವರು ಈ ಸಿನಿಮಾ ನಿರ್ದೇಶಿಸಲಿದ್ದಾರೆ.

‘ಬದಾಯಿ ಹೋ’ ನಿರ್ದೇಶಕ

ಜಾನ್ಹವಿ ಕಪೂರ್ ಅವರಿಗೆ ಬಾಲಿವುಡ್​ನಲ್ಲಿ ಒಂದೂ ಸಹ ದೊಡ್ಡ ಹಿಟ್ ಈ ವರೆಗೆ ಸಿಕ್ಕಿಲ್ಲ.

     ದೊಡ್ಡ ಹಿಟ್ ಸಿಕ್ಕಿಲ್ಲ

ಈ ಸಿನಿಮಾ ಮೂಲಕ ಆದರೂ ಅವರಿಗೆ ದೊಡ್ಡ ಹಿಟ್ ಸಿಗಲಿದೆಯೇ ಎಂಬುದು ಅವರ ಅಭಿಮಾನಿಗಳ ನಿರೀಕ್ಷೆ.

    ಅಭಿಮಾನಿಗಳ ನಿರೀಕ್ಷೆ

ಶಾಹಿದ್ ಕಪೂರ್ ಸಹ ದೊಡ್ಡ ಹಿಟ್ ಸಿನಿಮಾ ಒಂದನ್ನು ನೀಡಿ ಬಹಳ ಸಮಯ ಆಗಿದೆ.

    ಬಹಳ ಸಮಯ ಆಗಿದೆ