‘ಪೆದ್ದಿ’ ಬಿಡುಗಡೆಗೆ ಮುಂಚೆಯೇ ತೆಲುಗು ಪ್ರೇಕ್ಷಕರ ಮನಗೆದ್ದ ಜಾನ್ಹವಿ

03 June 2026

By  Manjunatha

ಜಾನ್ಹವಿ ಕಪೂರ್, ಬಾಲಿವುಡ್​​ನ ಬಲು ಜನಪ್ರಿಯ ಯುವನಟಿ, ಅವರ ಕೈಯಲ್ಲಿ ಹಲವು ಸಿನಿಮಾಗಳಿವೆ.

   ನಟಿ ಜಾನ್ಹವಿ ಕಪೂರ್

ಬಾಲಿವುಡ್​​ನಲ್ಲಿ ದೊಡ್ಡ ಹಿಟ್ ಕೊಡದಿದ್ದರೂ ಸಹ ಒಂದರ ಹಿಂದೊಂದು ಸಿನಿಮಾ ಅವರಿಗೆ ಸಿಗುತ್ತಲೇ ಇವೆ.

ಒಂದರ ಹಿಂದೊಂದು ಚಿತ್ರ

ಇದೀಗ ದಕ್ಷಿಣ ಚಿತ್ರರಂಗಕ್ಕೂ ಕಾಲಿಟ್ಟಿರುವ ಜಾನ್ಹವಿ ಕಪೂರ್, ‘ಪೆದ್ದಿ’ ಮೂಲಕ ಎರಡು ತೆಲುಗು ಸಿನಿಮಾ ಮುಗಿಸಿದ್ದಾರೆ.

  ಎರಡು ತೆಲುಗು ಸಿನಿಮಾ

‘ಪೆದ್ದಿ’ ಸಿನಿಮಾ ಬಿಡುಗಡೆ ಆಗಲು ಕೆಲವು ಗಂಟೆಗಳು ಬಾಕಿ ಇದೆ. ಸಿನಿಮಾ ಬಿಡುಗಡೆಗೆ ಮುಂಚೆಯೇ ತೆಲುಗರ ಮನ ಗೆದ್ದಿದ್ದಾರೆ ನಟಿ.

   ‘ಪೆದ್ದಿ’ ಸಿನಿಮಾ ರಿಲೀಸ್

ಇತ್ತೀಚೆಗೆ ಆಂಧ್ರದಲ್ಲಿ ನಡೆದ ‘ಪೆದ್ದಿ’ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಜಾನ್ಹವಿ ಕಪೂರ್ ಅವರು ತೆಲುಗು ಪ್ರೇಕ್ಷಕರ ಮನಗೆದ್ದಿದ್ದಾರೆ.

       ‘ಪೆದ್ದಿ’ ಪ್ರೀ ರಿಲೀಸ್

ಮೂಲತಃ ಬಾಲಿವುಡ್​ಗೆ ಸೇರಿದವರಾದರೂ ಜಾನ್ಹವಿ ಕಪೂರ್ ಅವರು ಸಂಪೂರ್ಣ ಭಾಷಣ ತೆಲುಗಿನಲ್ಲೇ ಮಾಡಿದ್ದು ವಿಶೇಷ.

     ತೆಲುಗಿನಲ್ಲೇ ಭಾಷಣ

ಅದು ಮಾತ್ರವೇ ಅಲ್ಲದೆ, ತೆಲುಗರ ಮೆಚ್ಚಿನ ನಾಯಕಿ, ಜಾನ್ಹವಿಯ ತಾಯಿ ಶ್ರೀದೇವಿಯ ಡೈಲಾಗ್ ಸಹ ಹೇಳಿ ಮನರಂಜಿಸಿದರು.

    ಶ್ರೀದೇವಿಯ ಡೈಲಾಗ್

ಇದೇ ಕಾರಣಕ್ಕೆ ಜಾನ್ಹವಿ ಕಪೂರ್ ಅವರು ‘ಪೆದ್ದಿ’ ರಿಲೀಸ್​​ಗೆ ಮುಂಚೆಯೇ ತೆಲುಗರ ಮನ ಗೆದ್ದಿದ್ದಾರೆ.

  ತೆಲುಗರ ಮನ ಗೆದ್ದಿದ್ದಾರೆ