ಅಪಘಾತತದಲ್ಲಿ ಗಾಯಗೊಂಡರೇ ಕಾಜಲ್ ಅಗರ್ವಾಲ್, ನಿಜಕ್ಕೂ ಆಗಿರುವುದೇನು?

09 SEP 2025

By  Manjunatha

ಕಾಜಲ್ ಅಗರ್ವಾಲ್ ಪ್ಯಾನ್ ಇಂಡಿಯಾ ನಟಿ. ಚಿತ್ರರಂಗಕ್ಕೆ ಬಂದು 15 ವರ್ಷಗಳ ಬಳಿಕವೂ ಬೇಡಿಕೆ ಉಳಿಸಿಕೊಂಡಿದ್ದಾರೆ.

    ಪ್ಯಾನ್ ಇಂಡಿಯಾ ನಟಿ

ಕಾಜಲ್ ಅಗರ್ವಾಲ್​​ ಬಗ್ಗೆ ಇಂದು (ಸೆಪ್ಟೆಂಬರ್ 9) ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯೊಂದು ಹರಿದಾಡಿತು.

ಸಾಮಾಜಿಕ ಜಾಲತಾಣದಲ್ಲಿ

ನಟಿ ಕಾಜಲ್ ಅಗರ್ವಾಲ್ ಅವರು ಗಂಭೀರ ಅಪಘಾತದಲ್ಲಿ ಮೃತ ಪಟ್ಟಿದ್ದಾರೆ ಎಂಬ ಸುದ್ದಿ ಹರಿದಾಡಿತು.

      ಸುದ್ದಿ ಹರಿದಾಡಿತ್ತು

ನಟಿ ಕಾಜಲ್ ಅಗರ್ವಾಲ್ ಅವರ ಅಭಿಮಾನಿಗಳಿಗೆ ಈ ಸುದ್ದಿ ತೀವ್ರ ಆಘಾತ ಉಂಟು ಮಾಡಿತ್ತು.

ತೀವ್ರ ಆಘಾತ ನೀಡಿದ ಸುದ್ದಿ

ಆದರೆ ಇದೊಂದು ಸುಳ್ಳು ಸುದ್ದಿ ಆಗಿದ್ದು, ಸುಳ್ಳು ಸುದ್ದಿಯ ಬಗ್ಗೆ ಸ್ವತಃ ಕಾಜಲ್ ಸ್ಪಷ್ಟನೆ ನೀಡಿದ್ದಾರೆ.

  ಇದೊಂದು ಸುಳ್ಳು ಸುದ್ದಿ

ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಂಚಿಕೊಂಡಿರುವ ನಟಿ ಕಾಜಲ್, ತಮಗೆ ಅಪಘಾತ ಆಗಿಲ್ಲ ಎಂದಿದ್ದಾರೆ.

         ಅಪಘಾತ ಆಗಿಲ್ಲ

ದೇವರ ದಯದಿಂದ ನಾನು ಕ್ಷೇಮವಾಗಿದ್ದೇನೆ, ಯಾವುದೇ ಅಪಘಾತ ಆಗಿಲ್ಲ. ನಾನು ಆರೋಗ್ಯದಿಂದಿದ್ದೇನೆ ಎಂದಿದ್ದಾರೆ.

   ನಾನು ಕ್ಷೇಮವಾಗಿದ್ದೇನೆ

ಕಾಜಲ್ ಅಗರ್ವಾಲ್ ಪ್ರಸ್ತುತ ಮೂರು ಹಿಂದಿ ಹಾಗೂ ಒಂದು ತಮಿಳು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

    ಹಲವು ಸಿನಿಮಾಗಳಿವೆ