ನಟ ಯಶ್​ಗೆ ಜೋಡಿಯಾದ ಖ್ಯಾತ ನಟಿ ಕಾಜಲ್ ಅಗರ್ವಾಲ್, ಯಾವ ಸಿನಿಮಾ?

16 May 2025

By  Manjunatha

ಯಶ್, ಈಗ ಪ್ಯಾನ್ ಇಂಡಿಯಾ ಸ್ಟಾರ್, ‘ಟಾಕ್ಸಿಕ್’ ಮೂಲಕ ಪ್ಯಾನ್ ವರ್ಲ್ಡ್ ಸ್ಟಾರ್ ಆಗಲಿದ್ದಾರೆ.

 ಪ್ಯಾನ್ ಇಂಡಿಯಾ ಸ್ಟಾರ್

ಯಶ್ ಅವರು ‘ಟಾಕ್ಸಿಕ್’ ಸಿನಿಮಾನಲ್ಲಿ ಭಾರತದ ಟಾಪ್ ನಟಿಯರನ್ನು ಹಾಕಿಕೊಂಡಿದ್ದಾರೆ.

        ಟಾಪ್ ನಟಿಯರು

‘ಟಾಕ್ಸಿಕ್’ ಸಿನಿಮಾನಲ್ಲಿ ಬಾಲಿವುಡ್​ನ ಟಾಪ್ ನಟಿ ಕಿಯಾರಾ ಅಡ್ವಾಣಿ ಮತ್ತು ದಕ್ಷಿಣದ ಸ್ಟಾರ್ ನಯನತಾರಾ ನಾಯಕಿ.

      ಇಬ್ಬರು ನಟಿಯರು

ಇದೀಗ ಹೊಸ ಸಿನಿಮಾ ಒಂದರಲ್ಲಿ ಪ್ಯಾನ್ ಇಂಡಿಯಾ ನಟಿ ಕಾಜಲ್ ಅಗರ್ವಾಲ್, ಯಶ್​ಗೆ ನಾಯಕಿ ಆಗಿದ್ದಾರೆ.

   ಪ್ಯಾನ್ ಇಂಡಿಯಾ ನಟಿ

ಯಶ್, ಹಿಂದಿಯ ರಾಮಾಯಣ ಆಧರಿಸಿದ ಸಿನಿಮಾನಲ್ಲಿ ರಾವಣನ ಪಾತ್ರ ಮಾಡುತ್ತಿರುವುದು ಗೊತ್ತಿರುವ ಸಂಗತಿ.

   ಹಿಂದಿಯ ರಾಮಾಯಣ

ರಾಮಾಯಣ ಆಧರಿಸಿದ ಸಿನಿಮಾನಲ್ಲಿ ರಾವಣನ ಪತ್ನಿ ಮಂಡೋದರಿಯ ಪಾತ್ರದಲ್ಲಿ ಕಾಜಲ್ ಅಗರ್ವಾಲ್ ನಟಿಸುತ್ತಿದ್ದಾರೆ.

ರಾವಣ ಪತ್ನಿ ಮಂಡೋದರಿ

ಕಾಜಲ್ ಅಗರ್ವಾಲ್ ‘ಮಗಧೀರ’ ಸಿನಿಮಾನಲ್ಲಿ ಯುವರಾಣಿಯ ಪಾತ್ರದಲ್ಲಿ ನಟಿಸಿದ್ದರು, ಈಗ ಮಂಡೋದರಿ ಪಾತ್ರ ಮಾಡಲಿದ್ದಾರೆ.

  ‘ಮಗಧೀರ’ ಸಿನಿಮಾನಲ್ಲಿ

ಕಾಜಲ್ ಅಗರ್ವಾಲ್ ಚಿತ್ರರಂಗಕ್ಕೆ ಕಾಲಿಟ್ಟು ದಶಕಗಳು ಕಳೆದಿದ್ದರೂ ಈಗಲೂ ಸಹ ಬೇಡಿಕೆ ಉಳಿಸಿಕೊಂಡಿದ್ದಾರೆ.

  ದಶಕಗಳು ಕಳೆದಿದ್ದರೂ...