ಪ್ರಭಾಸ್ ‘ಸ್ಪಿರಿಟ್’ ಸಿನಿಮಾನಲ್ಲಿ ಮತ್ತೊಬ್ಬ ಬಾಲಿವುಡ್ ಸ್ಟಾರ್ ನಟಿ

29 NOV 2025

By  Manjunatha

ಪ್ರಭಾಸ್ ನಟನೆಯ ‘ಸ್ಪಿರಿಟ್’ ಸಿನಿಮಾ ಚಿತ್ರೀಕರಣ ಆರಂಭಿಸುವ ಮುನ್ನವೇ ಸಖತ್ ಸದ್ದು, ಸುದ್ದಿ ಮಾಡುತ್ತಿದೆ.

ಪ್ರಭಾಸ್ ನಟನೆಯ ‘ಸ್ಪಿರಿಟ್’

‘ಸ್ಪಿರಿಟ್’ ಸಿನಿಮಾನಲ್ಲಿ ದೀಪಿಕಾ ಪಡುಕೋಣೆ ನಾಯಕಿ ಆಗಬೇಕಿತ್ತು, ಆದರೆ ಆ ಅವಕಾಶ ಈಗ ತೃಪ್ತಿ ದಿಮ್ರಿ ಪಾಲಾಗಿದೆ.

     ದೀಪಿಕಾ ಪಡುಕೋಣೆ 

ಬಾಲಿವುಡ್ ಬೆಡಗಿ ತೃಪ್ತಿ ದಿಮ್ರಿ ಅವರು ‘ಸ್ಪಿರಿಟ್’ ಸಿನಿಮಾ ಮೂಲಕ ಮೊದಲ ಬಾರಿಗೆ ದಕ್ಷಿಣ ಚಿತ್ರರಂಗಕ್ಕೆ ಬಂದಿದ್ದಾರೆ.

      ಬೆಡಗಿ ತೃಪ್ತಿ ದಿಮ್ರಿ

ಇದೀಗ ‘ಸ್ಪಿರಿಟ್’ ಸಿನಿಮಾನಲ್ಲಿ ತೃಪ್ತಿ ಮಾತ್ರವೇ ಅಲ್ಲದೆ ಮತ್ತೊಬ್ಬ ಬಾಲಿವುಡ್ ಸ್ಟಾರ್ ನಟಿ ಸಹ ನಟಿಸಲಿದ್ದಾರೆ.

   ಬಾಲಿವುಡ್ ಸ್ಟಾರ್ ನಟಿ

ಪ್ರಭಾಸ್ ‘ಸ್ಪಿರಿಟ್’ ಸಿನಿಮಾನಲ್ಲಿ ಕರೀನಾ ಕಪೂರ್ ನಟಿಸಲಿದ್ದಾರೆ ಎನ್ನಲಾಗಿತ್ತು. ಆದರೆ ಅವರು ಸಿನಿಮಾನಲ್ಲಿ ನಟಿಸುತ್ತಿಲ್ಲ.

   ಕರೀನಾ ಕಪೂರ್ ಸುದ್ದಿ

ಆದರೆ ಕರೀನಾ ಕಪೂರ್ ಬದಲಾಗಿ ಖ್ಯಾತ ನಟಿ ಕಾಜೋಲ್ ದೇವಗನ್ ಅವರು ಪ್ರಭಾಸ್ ಸಿನಿಮಾನಲ್ಲಿ ನಟಿಸಲಿದ್ದಾರೆ.

    ಖ್ಯಾತ ನಟಿ ಕಾಜೋಲ್

ಕಾಜೊಲ್ ಅದ್ಭುತವಾದ ನಟಿಯಾಗಿದ್ದು, ಇದೇ ಮೊದಲ ಬಾರಿಗೆ ಪೂರ್ಣ ತೆಲುಗು ಸಿನಿಮಾನಲ್ಲಿ ಕಾಜೊಲ್ ನಟಿಸಲಿದ್ದಾರೆ.

   ಕಾಜೊಲ್ ಅದ್ಭುತ ನಟಿ

ಅಂದಹಾಗೆ ಕಾಜೊಲ್, ಕೆಲ ತಮಿಳು ಸಿನಿಮಾಗಳಲ್ಲಿ ಈಗಾಗಲೇ ನಟಿಸಿದ್ದಾರೆ. ಅವರಿಗೆ ದಕ್ಷಿಣ ಚಿತ್ರರಂಗ ಹೊಸದೇನೂ ಅಲ್ಲ.

   ಮತ್ತೆ ದಕ್ಷಿಣ ಚಿತ್ರರಂಗ