‘ಕಲ್ಕಿ 2898 ಎಡಿ’ ಸಿನಿಮಾದಿಂದ ದೀಪಿಕಾ ಹೆಸರೇ ಗಾಯಬ್: ಅಭಿಮಾನಿಗಳಿಗೆ ಬೇಸರ

29 OCT 2025

By  Manjunatha

ದೀಪಿಕಾ ಪಡುಕೋಣೆ ಬಾಲಿವುಡ್​ನ ಟಾಪ್ ನಟಿ, ಆದರೆ ಇತ್ತೀಚೆಗೆ ತಮ್ಮ ಷರತ್ತುಗಳ ಕಾರಣದಿಂದ ಸುದ್ದಿಯಲ್ಲಿದ್ದಾರೆ.

     ದೀಪಿಕಾ ಪಡುಕೋಣೆ

ಎಂಟು ಗಂಟೆ ಮಾತ್ರವೇ ಕೆಲಸ ಮಾಡುವುದೆಂದು ಪಟ್ಟು ಹಿಡಿದಿರುವ ದೀಪಿಕಾ, ಅದೇ ಕಾರಣಕ್ಕೆ ಎರಡು ಸಿನಿಮಾ ಕಳೆದುಕೊಂಡಿದ್ದಾರೆ.

      ಸಿನಿಮಾ ಕೈ ತಪ್ಪಿವೆ

ಪ್ರಭಾಸ್ ಜೊತೆ ನಟಿಸಬೇಕಿದ್ದ ‘ಸ್ಪಿರಿಟ್’ ಮತ್ತು ಈಗಾಗಲೇ ಒಂದು ಭಾಗ ಬಿಡುಗಡೆ ಆಗಿರುವ ‘ಕಲ್ಕಿ’ ಸಿನಿಮಾಗಳನ್ನು ಕಳೆದುಕೊಂಡಿದ್ದಾರೆ.

    ಒಂದು ಭಾಗ ಬಿಡುಗಡೆ  

ಇದೀಗ ‘ಕಲ್ಕಿ 2898 ಎಡಿ’ ಚಿತ್ರತಂಡ ದೀಪಿಕಾ ಮೇಲೆ ಸಿಟ್ಟು ತೀರಿಸಿಕೊಂಡಿದೆ, ಸಿನಿಮಾದಿಂದ ದೀಪಿಕಾ ಹೆಸರನ್ನೇ ತೆಗೆದು ಹಾಕಿದೆ.

        ‘ಕಲ್ಕಿ 2898 ಎಡಿ’

‘ಕಲ್ಕಿ’ ಸಿನಿಮಾದ ಮೊದಲ ಭಾಗ ಒಟಿಟಿಯಲ್ಲಿ ಲಭ್ಯವಿದ್ದು, ಆ ಸಿನಿಮಾದಿಂದ ದೀಪಿಕಾ ಹೆಸರನ್ನು ತೆಗೆದು ಹಾಕಲಾಗಿದೆ.

ಹೆಸರು ತೆಗೆದು ಹಾಕಲಾಗಿದೆ

ದೀಪಿಕಾ ಪಡುಕೋಣೆ ಅಭಿಮಾನಿಗಳು ‘ಕಲ್ಕಿ’ ಸಿನಿಮಾದ ಎಂಡ್ ಕ್ರೆಡಿಟ್ ಸ್ಕ್ರೀನ್ ಶಾಟ್ ಶೇರ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ.

  ದೀಪಿಕಾ  ಅಭಿಮಾನಿಗಳು

‘ಕಲ್ಕಿ’ ಸಿನಿಮಾನಲ್ಲಿ ದೀಪಿಕಾ ನಟಿಸಿದ್ದಾರೆ, ಅವರು ಶ್ರಮ ಹಾಕಿದ್ದಾರೆ ಆದರೆ ಅವರ ಹೆಸರನ್ನು ತೆಗೆದು ಸಣ್ಣತನ ತೋರಿಸಿದ್ದಾರೆ ಎನ್ನಲಾಗುತ್ತಿದೆ.

   ಸಣ್ಣತನ ತೋರಿಸಿದ್ದಾರೆ

ಈ ಬಗ್ಗೆ ‘ಕಲ್ಕಿ 2898 ಎಡಿ’ ಸಿನಿಮಾ ತಂಡ ಯಾವುದೇ ಸ್ಪಷ್ಟನೆಯನ್ನು ಈ ವರೆಗೆ ನೀಡಿಲ್ಲ. ಕಾದು ನೋಡಬೇಕಿದೆ.

         ಸ್ಪಷ್ಟನೆ ನೀಡಿಲ್ಲ