ಫೈರ್ ಬ್ರ್ಯಾಂಡ್ ನಟಿ, ಈಗ ಸಂಸದೆಯೂ ಆಗಿರುವ ಈ ಬಾಲಕಿ ಯಾರೆಂದು ಗುರುತಿಸಬಲ್ಲಿರಾ?

19 June 2025

By  Manjunatha

ಶಾಲಾ ಯೂನಿಫಾರ್ಮ್​​ನಲ್ಲಿ ಮುದ್ದಾಗಿ ಕಾಣುತ್ತಿರುವ ಬಾಲಕಿ ಈಗ ಸಂಸದೆ, ಫೈರ್ ಬ್ರ್ಯಾಂಡ್ ನಟಿಯೂ ಹೌದು.

 ಈಗ ಸಂಸದೆ ಹಾಗೂ ನಟಿ

ಈ ಶಾಲಾ ಬಾಲಕಿ ಬೆಳೆದು ಈಗ ಬಾಲಿವುಡ್​ನ ‘ಕ್ವೀನ್’ ಕಂಗನಾ ರನೌತ್ ಆಗಿದ್ದಾರೆ. ಇದು ಕಂಗನಾ ಅವರ ಬಾಲ್ಯದ ಚಿತ್ರ.

  ‘ಕ್ವೀನ್’ ಕಂಗನಾ ರನೌತ್

ಕಂಗನಾ ರನೌತ್ ಬಹಳ ಕಷ್ಟಪಟ್ಟು ಚಿತ್ರರಂಗಕ್ಕೆ ಬಂದವರು, ನಟನೆಗೆ ಪೋಷಕರು, ಸಂಬಂಧಿಗಳ ವಿರೋಧ ಕಟ್ಟಿಕೊಂಡಿದ್ದರು.

ಕಷ್ಟಪಟ್ಟು ಬಂದವರು ನಟಿ

ಹದಿ ವಯಸ್ಸಿನಲ್ಲಿಯೇ ಮನೆಯಿಂದ ಓಡಿ ಬಂದು ಮುಂಬೈ ಸೇರಿಕೊಂಡಿದ್ದ ಕಂಗನಾ, ಆಗ ಅನುಭವಿಸಿದ ಕಷ್ಟಗಳು ಅಷ್ಟಿಷ್ಟಲ್ಲ.

 ಮನೆ ಬಿಟ್ಟು ಓಡಿ ಬಂದಿದ್ದ

ಆಗ ಅನುಭವಿಸಿದ ಕಷ್ಟಗಳು, ನೋಡಿದ ಕೆಟ್ಟ ಜನರು, ಕೆಟ್ಟ ಸಂಸ್ಕೃತಿಯೇ ಕಂಗನಾರನ್ನು ಈಗ ಫೈರ್ ಬ್ರ್ಯಾಂಡ್ ನಟಿಯನ್ನಾಗಿ ಮಾಡಿದೆ.

     ಫೈರ್ ಬ್ರ್ಯಾಂಡ್ ನಟಿ

ಕಂಗನಾ ರನೌತ್ ತಮ್ಮ ಬಿಡು ಬೀಸು ಮಾತಿನಿಂದ ಖ್ಯಾತರು. ಅವರ ಕಂಡರೆ ಇಡೀ ಬಾಲಿವುಡ್ ಹೆದರುತ್ತದೆ.

      ಬಿಡು ಬೀಸು ಮಾತು

ಕಂಗನಾ ರನೌತ್ ಈಗ ಬಿಜೆಪಿ ಸಂಸದೆ ಸಹ ಹೌದು. ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದಾರೆ ಅವರು.

ಬಿಜೆಪಿ ಸಂಸದೆ ಸಹ ಹೌದು

ಕಂಗನಾ ರನೌತ್ ರಾಜಕಾರಣದ ಜೊತೆಗೆ ಇದೀಗ ಸಿನಿಮಾಗಳಲ್ಲಿ ನಟಿಸುವುದನ್ನೂ ಮುಂದುವರೆಸಿದ್ದಾರೆ.

    ಸಿನಿಮಾಗಳಲ್ಲಿ ನಟನೆ