ತೆಲುಗು ಬಿಗ್​​ಬಾಸ್​​ 9ರ ಮೊದಲ ಸ್ಪರ್ಧಿ ಕನ್ನಡದ ಈ ನಟಿ, ಯಾರೀಕೆ?

07 SEP 2025

By  Manjunatha

ತೆಲುಗು ಬಿಗ್​​ಬಾಸ್ ಸೀಸನ್ 9 ಇಂದು (ಸೆಪ್ಟೆಂಬರ್ 07) ಪ್ರಾರಂಭ ಆಗಿದೆ. ನಾಗಾರ್ಜುನ ಈ ಸೀಸನ್​​ನ ನಿರೂಪಕ.

     ತೆಲುಗು ಬಿಗ್​​ಬಾಸ್​​ 9

ಈ ಸೀನಸ್​​ನ ಮೊದಲ ಸ್ಪರ್ಧಿಯಾಗಿ ಅಕ್ಕಿನೇನಿ ನಾಗಾರ್ಜುನ ಆಹ್ವಾನಿಸಿದ್ದು ಕನ್ನಡದ ಓರ್ವ ನಟಿಯನ್ನು ಎಂಬುದು ವಿಶೇಷ.

   ಅಕ್ಕಿನೇನಿ ನಾಗಾರ್ಜುನ

ಕನ್ನಡ ಸಿನಿಮಾ ಮೂಲಕ ನಟನೆಗೆ ಎಂಟ್ರಿ ಕೊಟ್ಟು ಈಗ ತೆಲುಗು ಟಿವಿ ಲೋಕದ ತಾರೆಯಾಗಿರುವ ತನುಜಾ ಗೌಡ.

     ಕನ್ನಡದ ನಟಿ ಎಂಟ್ರಿ

ತನುಜಾ ಗೌಡ ತೆಲುಗು ಟಿವಿ ಲೋಕದಲ್ಲಿ ತನುಜಾ ಪುಟ್ಟಸ್ವಾಮಿ ಎಂದೇ ಖ್ಯಾತರಾಗಿದ್ದು, ಇವರು ಕನ್ನಡದ ನಟಿಯಾಗಿದ್ದಾರೆ.

      ತನುಜಾ ಪುಟ್ಟಸ್ವಾಮಿ

‘6-5=3’ ಹಾರರ್ ಸಿನಿಮಾ ಮೂಲಕ ಎಂಟ್ರಿ ಕೊಟ್ಟ ತನುಜಾ, ಈಗ ತೆಲುಗು ಟಿವಿ ಲೋಕದ ತಾರೆ.

 ‘6-5=3’ ಹಾರರ್ ಸಿನಿಮಾ

ತೆಲುಗಿನ ‘ಅಂದಾಲ ರಾಕ್ಷಸಿ’, ‘ಮುದ್ದು ಮಂದಾರಮ್’ ಧಾರಾವಾಹಿಗಳು ಭಾರಿ ದೊಡ್ಡ ಹಿಟ್ ಆಗಿವೆ.

      ದೊಡ್ಡ ಹಿಟ್ ಆಗಿವೆ

ತೆಲುಗಿನಲ್ಲಿ ಹಿಟ್ ಆದ ಬಳಿಕ ತಮಿಳಿನ ‘ಅಗ್ನಿಪರೀಕ್ಷ’ ಮತ್ತು ‘ಶಿವ ಮನುಸಲ ಶಕ್ತಿ’ ಧಾರಾವಾಹಿಯಲ್ಲಿ ನಟಿಸಿದ್ದಾರೆ.

ತಮಿಳಿನ ಧಾರಾವಾಹಿಗಳು

ಇದೀಗ ತೆಲುಗು ಬಿಗ್​​ಬಾಸ್ ಸೀಸನ್ 9ಕ್ಕೆ ನಟಿ ತನುಜಾ ಎಂಟ್ರಿ ನೀಡಿದ್ದು, ಉತ್ತಮವಾಗಿ ಆಡುವ ನಿರೀಕ್ಷೆ ಇದೆ.

     ಗೆಲ್ಲುವ ಭರವಸೆಯಲ್ಲಿ