ಕರೀನಾ ಕಪೂರ್​ ಬಾತ್​ರೂಂನಲ್ಲಿತ್ತು ಆ ಬಾಲಿವುಡ್ ಸ್ಟಾರ್​ ನಟನ ಫೋಟೊ

27 June 2025

By  Manjunatha

ಕರೀನಾ ಕಪೂರ್, ಬಾಲಿವುಡ್​ನ ಸ್ಟಾರ್ ನಟಿ. ಅವರ ಅಕ್ಕ ಕರಿಶ್ಮಾರನ್ನೂ ಮೀರಿಸಿಬಿಟ್ಟಿದ್ದಾರೆ ಕರೀನಾ ಕಪೂರ್.

     ನಟಿ ಕರೀನಾ ಕಪೂರ್

ಹಲವು ಐಕಾನಿಕ್ ಸಿನಿಮಾಗಳನ್ನು ಕರೀನಾ ನೀಡಿದ್ದು 25 ವರ್ಷಗಳಿಂದಲೂ ಚಿತ್ರರಂಗದಲ್ಲಿದ್ದಾರೆ. ಈಗಲೂ ಅವರಿಗೆ ಬೇಡಿಕೆ ಇದೆ.

     25 ವರ್ಷಗಳಿಂದಲೂ

ಕರೀನಾ ಕಪೂರ್ ಸ್ವತಃ ಅತಿದೊಡ್ಡ ಸಿನಿಮಾ ಕುಟುಂಬದ ಹಿನ್ನೆಲೆಯಿಂದ ಬಂದವರು, ಅವರ ಕುಟುಂಬದಲ್ಲೇ ಹಲವು ಸ್ಟಾರ್​ ನಟರಿದ್ದಾರೆ.

ಸಿನಿಮಾ ಕುಟುಂಬ ಹಿನ್ನೆಲೆ

ಆದರೆ ಕರೀನಾಗೆ ಅವರ್ಯಾರೂ ಇಷ್ಟ ಇರಲಿಲ್ಲವಂತೆ. ಬದಲಿಗೆ ಬೇರೊಬ್ಬ ಸ್ಟಾರ್ ನಟನ ಫೋಟೊ ಅನ್ನು ಬಾತ್​ರೂಂನಲ್ಲಿ ಹಾಕಿಕೊಂಡಿದ್ದರು.

    ಸ್ಟಾರ್ ನಟನ ಫೋಟೊ

ಬಾಲಿವುಡ್​ನ ಸ್ಟಾರ್ ನಟ ಸಲ್ಮಾನ್ ಖಾನ್ ಎಂದರೆ ಕರೀನಾಗೆ ಬಹಳ ಇಷ್ಟ ಇತ್ತಂತೆ. ಇದೇ ಕಾರಣಕ್ಕೆ ಸಲ್ಮಾನ್ ಫೋಟೊವನ್ನು ಬಾತ್​​ರೂಂನಲ್ಲಿ ಇಟ್ಟುಕೊಂಡಿದ್ದರಂತೆ.

ಸ್ಟಾರ್ ನಟ ಸಲ್ಮಾನ್ ಖಾನ್

ಸಲ್ಮಾನ್ ಖಾನ್ ಅನ್ನು ಬಹುವಾಗಿ ಇಷ್ಟಪಡುತ್ತಿದ್ದ ನಟಿ ಕರೀನಾ, ಸಲ್ಮಾನ್ ಅವರ ಗೆಳೆಯ ಸೈಫ್ ಅಲಿ ಖಾನ್ ಅನ್ನು ಮದುವೆಯಾದರು.

     ಫ್ ಅಲಿ ಖಾನ್ ಜೊತೆ

ಕರೀನಾ ಕಪೂರ್ ಈಗ ಇಬ್ಬರು ಮಕ್ಕಳ ತಾಯಿ. ಈಗಲೂ ಸಹ ಆಗಾಗ್ಗೆ ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ನಟಿಸುತ್ತಿರುತ್ತಾರೆ.

   ಇಬ್ಬರು ಮಕ್ಕಳ ತಾಯಿ

ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾನಲ್ಲಿ ಕರೀನಾ ಕಪೂರ್ ನಟಿಸಬೇಕಿತ್ತು. ಆದರೆ ಅನಿವಾರ್ಯ ಕಾರಣಗಳಿಂದ ಅದು ಸಾಧ್ಯ ಆಗಲಿಲ್ಲ.

   ‘ಟಾಕ್ಸಿಕ್’ ಸಿನಿಮಾನಲ್ಲಿ