ದಕ್ಷಿಣದ ನಟನ ಸಿನಿಮಾ ಮೂಲಕ ಕಮ್ ಬ್ಯಾಕ್ ಮಾಡಲಿರುವ ಕತ್ರಿನಾ ಕೈಫ್

24 July 2026

By  Manjunatha

ದೀಪಿಕಾ, ಆಲಿಯಾ, ಕರೀನಾ ರೀತಿಯೇ ಕತ್ರಿನಾ ಕೈಫ್ ಸಹ ಬಾಲಿವುಡ್​​ನ ಸ್ಟಾರ್ ನಟಿಯಾಗಿ ಗುರುತಿಸಿಕೊಂಡವರು.

  ಬಾಲಿವುಡ್​​ನ ಸ್ಟಾರ್ ನಟಿ

ಸಲ್ಮಾನ್, ಶಾರುಖ್ ಖಾನ್, ರಣ್​​ಬೀರ್ ಸೇರಿದಂತೆ ಹಲವು ಸ್ಟಾರ್ ನಟರುಗಳೊಟ್ಟಿಗೆ ನಟಿಸಿದ್ದಾರೆ ಕತ್ರಿನಾ ಕೈಫ್

   ಸ್ಟಾರ್ ನಟರುಗಳೊಟ್ಟಿಗೆ

ಆದರೆ ಮದುವೆಯಾದ ಬಳಿಕ ನಿಧಾನಕ್ಕೆ ಚಿತ್ರರಂಗದಿಂದ ದೂರಾದ ನಟಿ, ಕಳೆದ ಎರಡು ವರ್ಷಗಳಿಂದ ಸಿನಿಮಾಗಳಲ್ಲಿ ನಟಿಸಿಲ್ಲ.

    ಚಿತ್ರರಂಗದಿಂದ ದೂರ

ಇತ್ತೀಚೆಗಷ್ಟೆ ಮುದ್ದಾದ ಗಂಡು ಮಗುವಿನ ತಾಯಿಯೂ ಸಹ ಆಗಿರುವ ಕತ್ರಿನಾ ಇದೀಗ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ.

  ಗಂಡು ಮಗುವಿನ ತಾಯಿ

ಕತ್ರಿನಾ ಕೈಫ್ ಅವರು ದಕ್ಷಿಣದ ಸಿನಿಮಾ ಮೂಲಕ ನಟನೆಗೆ ಕಮ್ ಬ್ಯಾಕ್ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

    ನಟನೆಗೆ ಕಮ್ ಬ್ಯಾಕ್

ಕತ್ರಿನಾ ಕೈಫ್ ಅವರು ಪ್ರಭಾಸ್ ನಟನೆಯ ‘ಸ್ಪಿರಿಟ್’ ಸಿನಿಮಾದ ಪ್ರಮುಖ ಪಾತ್ರವೊಂದರಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಇದೆ.

    ‘ಸ್ಪಿರಿಟ್’ ಸಿನಿಮಾನಲ್ಲಿ

ಕತ್ರಿನಾ ಕೈಫ್ ಅವರನ್ನು ‘ಸ್ಪಿರಿಟ್’ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಸಂಪರ್ಕಿಸಿ ಕತೆ ಹೇಳಿ ಒಪ್ಪಿಸಿದ್ದಾರಂತೆ.

    ಸಂದೀಪ್ ರೆಡ್ಡಿ ವಂಗಾ

ಕತ್ರಿನಾ ಕೈಫ್ ಅವರು ಕೊನೆಯದಾಗಿ 2024ರಲ್ಲಿ ಬಿಡುಗಡೆ ಆಗಿದ್ದ ‘ಮೇರಿ ಕ್ರಿಸ್​​ಮಸ್’ ಸಿನಿಮಾನಲ್ಲಿ ವಿಜಯ್ ಸೇತುಪತಿ ಜೊತೆ ನಟಿಸಿದ್ದರು.

       ವಿಜಯ್ ಸೇತುಪತಿ