ಶ್ರೀಲೀಲಾ ಕೈಯಲ್ಲಿದ್ದ ಅವಕಾಶವನ್ನು ಬಾಚಿಕೊಂಡ ಕ್ಯೂಟ್ ನಟಿ ಖಯಾದು

17 July 2026

By  Manjunatha

ಖಯಾದು ಲೋಹರ್, ಕನ್ನಡ ಸಿನಿಮಾ ಮೂಲಕ ನಟನೆಗೆ ಎಂಟ್ರಿ ಕೊಟ್ಟು ಈಗ ಪರಭಾಷೆಗಳಲ್ಲಿ ಮಿಂಚುತ್ತಿದ್ದಾರೆ.

ನಟಿ ಖಯಾದು ಲೋಹರ್

ಕನ್ನಡದ ‘ಮುಗಿಲ್ ಪೇಟೆ’ ಸಿನಿಮಾ ಮೂಲಕ ಖಯಾದು ಲೋಹರ್ ಅವರು ಚಿತ್ರರಂಗಕ್ಕೆ ಎಂಟ್ರಿ ನೀಡಿದರು.

  ‘ಮುಗಿಲ್ ಪೇಟೆ’ ಸಿನಿಮಾ

ಸೌಂದರ್ಯದ ಜೊತೆಗೆ ಒಳ್ಳೆಯ ನಟಿಯೂ ಆಗಿರುವ ಖಯಾದು ಅವರಿಗೆ ಈಗ ಹಲವು ಚಿತ್ರರಂಗದಲ್ಲಿ ಅವಕಾಶಗಳಿವೆ.

    ಹಲವು ಚಿತ್ರರಂಗದಲ್ಲಿ

ಇದೀಗ ನಟಿ ಖಯಾದು ಅವರು, ಶ್ರೀಲೀಲಾ ಅವರ ಕೈಯಲ್ಲಿದ್ದ ಸಿನಿಮಾ ಅವಕಾಶವನ್ನು ಸಹ ಬಾಚಿಕೊಂಡಿದ್ದಾರೆ.

       ಶ್ರೀಲೀಲಾ ಸಿನಿಮಾ

ಶ್ರೀಲೀಲಾ ಅವರು ತಮಿಳಿನ ಸ್ಟಾರ್ ನಟ ಅಜಿತ್ ನಟನೆಯ ಹೊಸ ಸಿನಿಮಾನಲ್ಲಿ ನಾಯಕಿಯಾಗಿ ನಟಿಸಬೇಕಿತ್ತು.

 ಅಜಿತ್ ನಟನೆಯ ಸಿನಿಮಾ

ಆದರೆ ಈಗ ಆ ದೊಡ್ಡ ಸಿನಿಮಾನಲ್ಲಿ ನಟಿಸುವ ಅವಕಾಶ ನಟಿ ಖಯಾದು ಲೋಹರ್ ಅವರ ಪಾಲಾಗಿದೆ.

 ಖಯಾದು ಲೋಹರ್ ಕೈಗೆ

ಖಯಾದು ಅವರ ಕೈಯಲ್ಲಿ ಪ್ರಸ್ತುತ ಬರೋಬ್ಬರಿ ಏಳು ಸಿನಿಮಾಗಳಿವೆ. ಅವುಗಳಲ್ಲಿ ಕೆಲವು ರಿಲೀಸ್​​ಗೆ ಸಹ ರೆಡಿಯಾಗಿವೆ

      ಏಳು ಸಿನಿಮಾಗಳಿವೆ

ಅಸ್ಸಾಂ ಮೂಲದ ನಟಿ ಖಯಾದು ಲೋಹರ್ ಅವರು ತಮ್ಮ ಪ್ರತಿಭೆ ಮೂಲಕ ದಕ್ಷಿಣ ಭಾರತ ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ.

   ಅಸ್ಸಾಂ ಮೂಲದ ನಟಿ