ನಟಿ ಕೀರ್ತಿ ಸುರೇಶ್ ಕೈಯಲ್ಲಿರುವ ಸಿನಿಮಾಗಳೆಷ್ಟು ಗೊತ್ತೆ?

07 AUG 2026

By  Manjunatha

ಕೀರ್ತಿ ಸುರೇಶ್ ದಕ್ಷಿಣದ ಸ್ಟಾರ್ ನಟಿ, ನಟನೆಗೆ ರಾಷ್ಟ್ರಪ್ರಶಸ್ತಿ ಪಡೆದಿದ್ದಾರೆ ಈ ಪ್ರತಿಭಾವಂತೆ.

    ದಕ್ಷಿಣದ ಸ್ಟಾರ್ ನಟಿ

ಕೀರ್ತಿ ಸುರೇಶ್ 2024ರ ಅಂತ್ಯದಲ್ಲಿ ಬಹು ವರ್ಷದ ಗೆಳೆಯ ಆಂಟೊನಿ ತಟ್ಟಿಲ್ ಜೊತೆ ವಿವಾಹವಾದರು.

 ಆಂಟೊನಿ ತಟ್ಟಿಲ್ ಜೊತೆ

ಮದುವೆಯಾದ ಬಳಿಕ ಕೀರ್ತಿ ಸುರೇಶ್ ಅವರಿಗೆ ಸಿನಿಮಾ ಅವಕಾಶ ಕಡಿಮೆ ಆಗಲಿದೆ ಎಂಬ ಸುದ್ದಿ ಹಬ್ಬಿತ್ತು.

ಅವಕಾಶ ಕಡಿಮೆ ಆಗಲಿದೆ?

ಆದರೆ ಆ ಸುದ್ದಿ ಸಂಪೂರ್ಣ ಸುಳ್ಳಾಗಿದೆ. ಈಗಲೂ ಸಹ ಕೀರ್ತಿ ಸುರೇಶ್ ಕೈಯಲ್ಲಿ ಏಳು ಸಿನಿಮಾಗಳಿವೆ.

 ಕೈಯಲ್ಲಿ 7 ಸಿನಿಮಾಗಳಿವೆ

ತಮಿಳಿನ ‘ಕನ್ನಿವೀದಿ’ ಮತ್ತು ‘ಸತ್ಯವಾನ್ ಸಾವಿತ್ರಿ’ ಸಿನಿಮಾಗಳಲ್ಲಿ ಕೀರ್ತಿ ಸುರೇಶ್ ನಟಿಸುತ್ತಿದ್ದಾರೆ.

      ‘ಸತ್ಯವಾನ್ ಸಾವಿತ್ರಿ’

ತೆಲುಗಿನಲ್ಲಿ ವಿಜಯ್ ದೇವರಕೊಂಡ ಜೊತೆ ‘ರೌಡಿ ಜನಾರ್ಧನ್’ ಮತ್ತು ಹೆಸರಿಡದ ಇನ್ನೊಂದು ಸಿನಿಮಾನಲ್ಲಿ ನಟಿಸುತ್ತಿದ್ದಾರೆ.

       ‘ರೌಡಿ ಜನಾರ್ಧನ್’

ಮಾತೃಭಾಷೆ ಮಲಯಾಳಂನಲ್ಲಿ ‘ತೊಟ್ಟಮ್’ ಹೆಸರಿನ ಸಿನಿಮಾ ಹಿಂದಿಯಲ್ಲಿ ‘ರಫ್ತಾರ್’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ.

     ‘ತೊಟ್ಟಮ್’, ರಫ್ತಾರ್

ಇದೀಗ ತಮಿಳಿನಲ್ಲಿ ಕಾರ್ತಿಕ್ ಸುಬ್ಬರಾಜು ನಿರ್ದೇಶನದ ಹೊಸ ಸಿನಿಮಾನಲ್ಲಿ ಕೀರ್ತಿ ನಟಿಸುತ್ತಿದ್ದಾರೆ.

    ಕಾರ್ತಿಕ್ ಸುಬ್ಬರಾಜು