ರಾಷ್ಟ್ರಪ್ರಶಸ್ತಿ ಸಿಕ್ಕರೂ ಆರು ತಿಂಗಳು ಕೆಲಸ ಇರದೇ ಕೂತಿದ್ದೆ: ಕೀರ್ತಿ ಸುರೇಶ್

26 NOV 2025

By  Manjunatha

ಕೀರ್ತಿ ಸುರೇಶ್ ದಕ್ಷಿಣ ಭಾರತದ ಅತ್ಯಂತ ಪ್ರತಿಭಾವಂತ ನಟಿಯರಲ್ಲಿ ಒಬ್ಬರಾಗಿದ್ದಾರೆ.

 ಪ್ರತಿಭಾವಂತ ನಟಿ ಕೀರ್ತಿ

‘ಮಹಾನಟಿ’ ಸಿನಿಮಾದ ಅತ್ಯುತ್ತಮ ನಟನೆಗಾಗಿ ರಾಷ್ಟ್ರಪ್ರಶಸ್ತಿಯನ್ನು ಸಹ ಕೀರ್ತಿ ಸುರೇಶ್ ಪಡೆದಿದ್ದಾರೆ.

      ‘ಮಹಾನಟಿ’ ಸಿನಿಮಾ

ಆದರೆ ‘ಮಹಾನಟಿ’ ಅಂಥಹಾ ಅದ್ಭುತ ಸಿನಿಮಾ ನೀಡಿದ ಬಳಿಕ ಅವರಿಗೆ ಸಿನಿಮಾ ಆಫರ್​​ಗಳೇ ಇಲ್ಲವಾದವಂತೆ.

 ಸಿನಿಮಾ ಆಫರ್​​ಗಳೇ ಇಲ್ಲ

‘ಮಹಾನಟಿ’ ಸಿನಿಮಾದ ಬಳಿಕ ಕೀರ್ತಿ ಸುರೇಶ್​​ಗೆ ಯಾರೂ ಆಫರ್ ನೀಡಲಿಲ್ಲವಂತೆ, ಆರು ತಿಂಗಳು ಕೆಲಸವಿಲ್ಲದೆ ಕೂತಿದ್ದರಂತೆ ನಟಿ.

ಯಾರೂ ಆಫರ್ ನೀಡಲಿಲ್ಲ

‘ಆ ಸಮಯದಲ್ಲಿ ನನಗೆ ನನ್ನ ಮೇಲೆಯೇ ನಂಬಿಕೆ ಹೋಗಿತ್ತು. ಆದರೆ ನಾನು ಆ ಸಮಯದಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇಟ್ಟೆ’ ಎಂದಿದ್ದಾರೆ ಕೀರ್ತಿ.

ಎಚ್ಚರಿಕೆಯಿಂದ ಹೆಜ್ಜೆ ಇಟ್ಟೆ

ಆ ಬಳಿಕ ಕೆಲ ಅವಕಾಶಗಳು ಬಂದರೂ ಸಹ ಬಹಳ ಯೋಚನೆ ಮಾಡಿ ಎಚ್ಚರಿಕೆಯಿಂದ ಸಿನಿಮಾಗಳನ್ನು ಆಯ್ದುಕೊಂಡರಂತೆ ನಟಿ.

 ಎಲ್ಲ ಸಿನಿಮಾ ಒಪ್ಪಲಿಲ್ಲ

ಕೀರ್ತಿ ಸುರೇಶ್ ಪ್ರಸ್ತುತ ಎರಡು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅದರಲ್ಲಿ ಒಂದು ಮಹಿಳಾ ಪ್ರಧಾನ ಸಿನಿಮಾ ಆಗಿದೆ.

    ಎರಡು ಸಿನಿಮಾಗಳಲ್ಲಿ

ಕೀರ್ತಿ ಸುರೇಶ್ ನಟಿಸಿರುವ ‘ರಿವಾಲ್ವರ್ ರೀಟಾ’ ಸಿನಿಮಾ ಇದೇ ವಾರ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ.

‘ರಿವಾಲ್ವರ್ ರೀಟಾ’ ಸಿನಿಮಾ